ಹೊಸ ಹೊಸ ಕಾರ್‍ಯಕ್ರಮಗಳಿಗೆ ಪೂರ್ಣ ಸಹಕಾರ- ಸೀತಾರಾಮ ರೈ
ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಫೆ. 4 ರಂದು ಭಾರತ ರಶ್ಮಿ ಎಂಬ ವಿನೂತನ ಕಾರ್‍ಯಕ್ರಮ ಜರಗಿತು.
74 ನೇ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯಾಗಿ ಭಾರತ ರಶ್ಮಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಕಾರ್‍ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಪಠ್ಯೇತ್ಯರ ಚಟುವಟಿಕೆಗೆ ವಿದ್ಯಾರಶ್ಮಿ ಪೂರ್ಣ ರೀತಿಯ ಬೆಂಬಲವನ್ನು ನೀಡಲಿದೆ. ಹೊಸ ಹೊಸ ಅವಿಷ್ಠಾರಗಳ ಕಾರ್‍ಯಕ್ರಮಗಳಿಗೆ ಸದಾ ಪ್ರೋತ್ಸಾಹವನ್ನು ನೀಡುವಲ್ಲಿ ವಿದ್ಯಾರಶ್ಮಿಯು ಮುಂದಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸ್ವರ್ಧಾತ್ಮಕ ಜಗತ್ತಿನಲ್ಲಿ ಸಾಧನೆಯ ಪಥದಲ್ಲಿ ಮುನ್ನಡೆ ಸಾಧಿಸಬೇಕೆಂದು ಹೇಳಿದರು.
ಜಗತ್ತಿಗೆ ಮಾದರಿ- ಅಶ್ವಿನ್ ಎಲ್ ಶೆಟ್ಟಿ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿರವರು ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಮತ್ತು ಅಧ್ಯಾತ್ಮಿಕತೆ ಜಗತ್ತಿಗೆ ಮಾದರಿಯಾಗಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಭಾರತ ರಶ್ಮಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಏಂಬೈಬ್ ಕಂಪೆನಿಯ ಅಕಾಡೆಮಿಕ್ ಅಡ್ವೈಸರ್ ಡಾ. ರಾಕಿ ಮತಾಯಿ ಆಂಟನಿರವರು ಸಂದರ್ಭೋಚಿತವಾಗಿ ಮಾತನಾಡಿದರು.ಏಂಬೈಬ್ ಕಂಪೆನಿಯ ಅಕಾಡೆಮಿಕ್‌ನ ಮಾರ್ಕೇಟಿಂಗ್ ಆಫೀಸರ್ ರಂಜನ್ ಶ್ರೀರಾಮ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವರವರು ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಪ್ರಣವ್ ಸ್ವಾಗತಿಸಿ, ಸಂತನುಕೃಷ್ಣ ವಂದಿಸಿದರು. ಆಯಿಷತ್ ವಾಫ ಕಾರ್‍ಯಕ್ರಮ ನಿರೂಪಿಸಿದರು.
ಕಾರ್‍ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚನ, ಚಿತ್ರಕಲೆ, ರಸಪ್ರಶ್ನೆ, ಪ್ರಬಂಧರಚನೆ ಹಾಗೂ ದೇಶ ಭಕ್ತಿಗೀತೆ ಗಾಯನವನ್ನು ನಡೆಸಲಾಯಿತು.
ಭಾರತ ರಶ್ಮಿಯಲ್ಲಿ 6 ಶಾಲೆಯ 82 ವಿದ್ಯಾರ್ಥಿಗಳು
ವಿನೂತನ ಶೈಲಿಯ ಕಾರ್‍ಯಕ್ರಮವಾದ ಭಾರತ ರಶ್ಮಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು.
ಸರ್ವೆ ಎಸ್‌ಜಿಎಂ, ಬೆಥನಿ ಪಾಂಗ್ಲಾಯಿ, ಶ್ರೀ ದುರ್ಗಾಂಬಾ ಅಲಂಕಾರು, ಮೊರಾರ್ಜಿ ಪ್ರೌಢಶಾಲೆ ಹರದನಹಳ್ಳಿ ಹಾಸನ, ಸ್ನೇಹ ಶಾಲೆ ಸುಳ್ಯ ಹಾಗೂ ಸೋಮವಾರ ಪೇಟೆಯ ಗೌಡಳ್ಳಿಯ ಬಿಜಿಎಸ್ ಸೇರಿದಂತೆ 6 ಶಾಲೆಯ ಒಟ್ಟು 82 ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಶಿಕ್ಷಣ ಕಾಶಿಯಾಗಿ ರಾಜ್ಯದಲ್ಲಿ ಗುರುತಿಸಲ್ಪಟ್ಟ ವಿದ್ಯಾರಶ್ಮಿಗೆ ಮತ್ತೊಂದು ಗರಿಮೆ ಬಂತು.