ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ದರ್ಶನ ಬಲಿ, ಶ್ರೀರಾಮ ಸಂದರ್ಶನೋತ್ಸವ ಫೆ.4ರಂದು ನಡೆಯಿತು.
ಬೆಳಿಗ್ಗೆ ನಂದಾದೀಪೋತ್ಸವ, ಉತ್ಸವ ನಡೆದು ಮಧ್ಯಾಹ್ನ ದರ್ಶನ ಬಲಿ, ಬಟ್ಟಲುಕಾಣಿಕೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಬಲಿ ಹೊರಟು, ದಂಡತೀರ್ಥ ಕೆರೆ ಉತ್ಸವ, ದೇವರಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆಗಳು ನಡೆದು ಶ್ರೀ ರಾಮ ಸಂದರ್ಶನೋತ್ಸವ ನಡೆಯಿತು. ರಾತ್ರಿ ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ, ಮಹಾಪೂಜೆ ನಡೆಯಿತು. ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ ಸದಸ್ಯರು, ಸಾವಿರಾರು ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂದು ಬ್ರಹ್ಮರಥೋತ್ಸವ
ಫೆ.5ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, 48 ತೆಂಗಿನ ಕಾಯಿಗಳ ಶ್ರೀ ಗಣಪತಿ ಹೋಮ ನಡೆಯಲಿದೆ. ರಾತ್ರಿ ಬಲಿ ಹೊರಟು ಉತ್ಸವ, ಬ್ರಹ್ಮರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ ನಡೆಯಲಿದೆ. ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ನಡೆಯಲಿದೆ.