ಸವಣೂರಿನಲ್ಲಿ ಹೊಂಗಿರಣ ಟ್ರೋಫಿ-2023-ನವಜೀವನ,ಒಕ್ಕೂಟ ಸದಸ್ಯರ ಕ್ರೀಡಾಕೂಟ,ಪ್ರೇರಣಾ ಶಿಬಿರ

0

ಸವಣೂರು :ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ,ಶ್ರೀ.ಕ್ಷೇ.ಧ.ಗ್ರಾ.ಯೋ ಕಡಬ ತಾಲೂಕು,ನವಜೀವನ ಸಮಿತಿ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸವಣೂರು ವಲಯ ಇದರ ಆಶ್ರಯದಲ್ಲಿ ಫೆ.5ರಂದು ಸವಣೂರಿನ ಪ್ರಿಯಕಾರಿಣಿ ಸಭಾಭವನದಲ್ಲಿ ನವಜೀವನ ಸದಸ್ಯರಿಗೆ,ಒಕ್ಕೂಟದ ಸದಸ್ಯರ ಕ್ರೀಡಾಕೂಟ  ಹೊಂಗಿರಣ ಟ್ರೋಫಿ-2023 ,ಪ್ರೇರಣಾ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ ಅವರು, ದೃಢಸಂಕಲ್ಪದಿಂದ ಬದುಕಿನಲ್ಲಿ ನವಚೈತನ್ಯ ಮೂಡಿ ಬಂದು ಜೀವನ ಪಾವನವಾಗುತ್ತದೆ. ಮದ್ಯ ವ್ಯಸನ ಮೊದಲಾದ ದುಶ್ಚಟದಂತಹ ವಿಕಲ್ಪದಿಂದ ವ್ಯಕ್ತಿತ್ವದ ಸರ್ವನಾಶವಾಗುತ್ತದೆ.ಜೀವನ ಸಂಸಾರವೇ ಹಾಳಾಗಿ ಕುಟುಂಬದವರ ಬಾಳೆಲ್ಲ ಗೋಳಾಗುತ್ತದೆ ಎಂದರು.

ಶ್ರೀ.ಕ್ಷೇ.ಧ. ಗ್ರಾ.ಯೋ.ಯ ಸವಣೂರು ವಲಯದ ಅಧ್ಯಕ್ಷ ರಾಮಚಂದ್ರ ಗೌಡ ಇಡ್ಯಡ್ಕ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ,ಸವಣೂರು ಪುದುಬೆಟ್ಟು ಜಿನಮಂದಿರದ ಅಧ್ಯಕ್ಷ ಬಿ. ಶತ್ರುಂಜಯ ಆರಿಗ,  ಅಧ್ಯಕ್ಷರು, ಪುದುಬೆಟ್ಟು ಜಿನಮಂದಿರ ಸವಣೂರು, ಅಗಳಿ  ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ,ಬೆಳಂದೂರು ಗ್ರಾ.ಪಂ.ಅಧ್ಯಕ್ಷೆ ಲೋಹಿತಾಕ್ಷ ಕೆ.,ಉಪಾಧ್ಯಕ್ಷೆ ತೇಜಾಕ್ಷಿ , ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಜನಜಾಗೃತಿ ವೇದಿಕೆಯ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಯೋಜನೆಯ ಮೇಲ್ವಿಚಾರಕಿ ಹರ್ಷ ಕುಮಾರಿ ವಂದಿಸಿದರು.ವೀರಮಂಗಲ ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ನಡೆದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಮಾದಕ ವ್ಯಸನದ ಪರಿಣಾಮ ಕುರಿತಾದ ಉಪನ್ಯಾಸ ಕಾರ್ಯಕ್ರಮವು ಸವಣೂರು ಪ.ಪೂ.ಕಾಲೇಜಿನ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಅಧ್ಯಕ್ಷತೆಯಲ್ಲಿ ನಡೆಯಿತು.ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಸಂಚಾಲಕ, ವಕೀಲ ಮುರಳೀಕೃಷ್ಣ ಚಳ್ಳಂಗಾರು ಉಪನ್ಯಾಸ ನೀಡಿದರು.

ಸವಣೂರುಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ,ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ಧರ್ಖಾಸು,ಉಪಾಧ್ಯಕ್ಷ ಗಣೇಶ ಉದನಡ್ಕ,ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಸವಣೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ  ಮನ್ಮಥ ಅಜಿರಂಗಳ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯದ ಸದಸ್ಯ ಅರವಿಂದ ಪುಣ್ಚತ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here