ಪುತ್ತೂರು: ಫೆ 7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಫೆ. 6 ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಜರಗಿತು.
ಸವಣೂರು ಜಿನಮಂದಿರದಿಂದ ಹೊರಟ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಮೆರವಣಿಗೆಯು ಪರಣೆ ಮಾರ್ಗವಾಗಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತಲುಪಿತು.
ಸವಣೂರಿನ ಉದ್ಯಮಿ ಎನ್ ಸುಂದರ ರೈ ಸವಣೂರುರವರು ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಉಪಾದ್ಯಕ್ಷ ಗಂಗಾಧರ್ ಸುಣ್ಣಾಜೆ, ಕಾರ್‍ಯದರ್ಶಿ ದಯಾನಂದ ಮಾಲೆತ್ತಾರು, ಕೋಶಾಧಿಕಾರಿ ರವೀಂದ್ರನಾಥ ರೈ ನೊಲ್ಮೆ, ಸವಣೂರು ಗ್ರಾಮ ದೈವ ಜೀರ್ಣೋದ್ದಾರ ಸಮಿತಿಯ ನಿಕಟಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲು, ಅಧ್ಯಕ್ಷ ಪುರಂದರ ಬಾರಿಕೆ, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ಪ್ರಧಾನ ಕಾರ್‍ಯದರ್ಶಿ ರಾಘವ ಗೌಡ ಸವಣೂರು, ಸವಣೂರು ಸಿ.ಎ ಬ್ಯಾಂಕ್ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ವಿಠಲ ರೈ ನೆಕ್ಕರೆ, ಸತೀಶ್ ಬಲ್ಯಾಯ ಕನಡಕುಮೇರು, ಬಾಬು ಗೌಡ ಕೆಯ್ಯೂರು, ನಾರಾಯಣ ಪೂಜಾರಿ ಕೆಯ್ಯೂರು, ದಾಮೋದರ ಗೌಡ ಪಟ್ಟೆ, ಸ್ವಸ್ತಿಕ್ ಪಟ್ಟೆ, ಚಂದ್ರಶೇಖರ್ ಅಂಬಟೆತಡಿ, ರುಕ್ಮಯ್ಯ ಗೌಡ ಹೊಸವೊಕ್ಲು, ಜಯರಾಮ ರೈ ಕನಡಕುಮೇರು, ಡೊಂಬಯ್ಯ ಪೂಜಾರಿ ಮಾಲೆತ್ತಾರು, ಅಂಗಾರ ಬೇರಿಕೆ, ಹರೀಶ್ ಸುಣ್ಣಾಜೆ, ಗಣೇಶ್ ಪಟ್ಟೆ, ಜಯರಾಮ ಸವಣೂರು ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು.
ಫೆ.7- ಫೆ.8 ಸವಣೂರು ದೇವಲಯದ ಜಾತ್ರೋತ್ಸವ : ಫೆ. 7 ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಕಲಶಾಭಿಷೇಕ, ದೇವರುಗಳ ಪ್ರತಿಷ್ಠಾ ದಿನದ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ನಡೆಯಲಿದೆ. ಮಧ್ಯಾಹ್ನ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ದೀಪಾರಾಧನೆ, ತಾಯಂಬಕ ಸೇವೆ, ರಂಗಪೂಜೆ,ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಗ್ರಾಮಸ್ಥರು ಮತ್ತು ಪರವೂರ ದಾನಿಗಳ ಸೇವಾರ್ಥವಾಗಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಫೆ. 8 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಮಧ್ಯಾಹ್ನ ಸವಣೂರುಗುತ್ತು ಕುಟುಂಬಸ್ಥರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದಾರರಾದ ಸವಣೂರುಗುತ್ತು ಡಾ| ರತ್ನಾಕರ ಶೆಟ್ಟಿ ಮತ್ತು ಕುಟುಂಬಸ್ಥರು, ಆಡಳಿತ ಸಮಿತಿಯ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಉತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಕಾರ್ಯದರ್ಶಿ ದಯಾನಂದ ಮಾಲೆತ್ತಾರು, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆರವರುಗಳು ತಿಳಿಸಿದ್ದಾರೆ.
ಫೆ. 8 ರಂದು ದೇವಸ್ಥಾನದ ಪಕ್ಕದಲ್ಲಿರುವ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ರಾತ್ರಿ 8 ರಿಂದ ಶ್ರೀ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ ನಡೆಯಲಿದೆ. ಕವಿತಾ ವಿ. ಶೆಟ್ಟಿ ಮತ್ತು ದೇಷ್ನಾ ಶೆಟ್ಟಿ ಬೆಂಗಳೂರುರವರ ಸೇವಾರ್ಥವಾಗಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಇದೇ ದಿನ ರಾತ್ರಿ ವಿಸ್ಮಿತಾ ಸಾಜನ್ ಹೆಗ್ಡೆರವರಿಂದ ಶ್ರೀ ಉಳ್ಳಾಲ್ತಿ ದೈವಕ್ಕೆ ಹರಕೆ ನೇಮೋತ್ಸವ ನಡೆಯಲಿದೆ.