ಜೆ.ಇ.ಇ. ಪರೀಕ್ಷೆ: ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳಿಂದ ದಾಖಲೆ

0

ಶ್ರೀಶ ಶರ್ಮ 99.03, 14 ವಿದ್ಯಾರ್ಥಿಗಳಿಂದ 90 ಪರ್ಸೆಂಟೈಲ್‌ಗೂ ಅಧಿಕ ಸಾಧನೆ


ಪುತ್ತೂರು: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ ರಾಷ್ಟ್ರಮಟ್ಟದ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ಕೃಷ್ಟ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 7 ಮಂದಿ ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ, 14 ಮಂದಿ ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಹಾಗೂ 19 ಮಂದಿ ವಿದ್ಯಾರ್ಥಿಗಳು 85ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.


ಕೊಕ್ಕಡದ ಕೃಷ್ಣಮೂರ್ತಿ ಕೆ ಮತ್ತು ಅನುಪಮಾ ಕೆ ದಂಪತಿಯ ಪುತ್ರ ಶ್ರೀಶ ಶರ್ಮ (99.0334), ಬೆಳ್ಳಾರೆಯ ಬಿ.ಕೆ ಸೂರ್ಯನಾರಾಯಣ ಮತ್ತು ವಿದ್ಯಾ ಕುಮಾರಿ ದಂಪತಿಯ ಪುತ್ರ ಆಶಿಶ್ ಗೋವಿಂದ (98.8197), ಪಡೀಲಿನ ಸಂಜಿತ್ ಕುಮಾರ್ ಮತ್ತು ಕುಮಾರಿ ಬಿನಿಟಾ ಸಿನ್ಹ ದಂಪತಿಯ ಪುತ್ರಿ ಖುಷಿ (98.3745), ಬೆಟ್ಟಂಪಾಡಿಯ ದಿನೇಶ್ ಮರಡಿತಾಯ ಮತ್ತು ಸಂಧ್ಯಾ ದಂಪತಿಯ ಪುತ್ರಿ ಶ್ರಾವಣಿ ಪಿ (97.3060), ಶಿರಸಿಯ ವಸಂತ್ ಕೃಷ್ಣಮೂರ್ತಿ ಹೆಗ್ಡೆ ಮತ್ತು ರೇಖ ದಂಪತಿಯ ಪುತ್ರ ತೇಜಸ್ವಿ ವಸಂತ ಹೆಗ್ಡೆ (96.2709), ಪಾಲ್ತಾಡಿಯ ಬಿ ಸತ್ಯನಾರಾಯಣ ನಿಡ್ವನ್ನಾಯ ಮತ್ತು ಅಶ್ವಿನಿ ಬಿ ಎಸ್ ದಂಪತಿಯ ಪುತ್ರ ಸಿದ್ಧಾರ್ಥ ಬಿ.ಎಸ್ (96.1502), ಬದಿಯಡ್ಕದ ಸುಬ್ರಹ್ಮಣ್ಯ ಪ್ರಸಾಧ್ ಮತ್ತು ಸುಧಾ ದಂಪತಿಯ ಪುತ್ರ ಅನಂತರಾಮ (95.7697), ಮಡಿಕೇರಿಯ ಜಿ.ಪಿ ಚಿನ್ನಪ್ಪ ಮತ್ತು ಜಿ.ಸಿ ಗಿರಿಜ ದಂಪತಿಯ ಪುತ್ರ ಜಿ. ಸಿ. ನಿಖಿಲ್ (94.0727), ಕಾಸರಗೋಡಿನ ಕೇಶವ ಶರ್ಮ ಮತ್ತು ಶ್ರೀವತ್ಸಲ ದಂಪತಿಯ ಪುತ್ರಿ ಪ್ರಣಮ್ಯ ಬಿ (93.789), ಸುಳ್ಯದ ಸೀತಾರಾಮ ಎನ್ ಜಿ ಮತ್ತು ಜಯಲಕ್ಷ್ಮಿ ಕೆ ದಂಪತಿಯ ಪುತ್ರ ಧೀರಜ್ ಬಿ.ಎಸ್ (93.0365), ಬಲ್ನಾಡಿನ ಮಹಾಬಲೇಶ್ವರ ಭಟ್ ವೈ ಮತ್ತು ಗೀತಾ ಕುಮಾರಿ ದಂಪತಿಯ ಪುತ್ರಿ ದಿಶಾಕಾ ವೈ ಭಟ್ (92.847), ನೆಟ್ಲಮುಡ್ನೂರಿನ ಕೆ ಗೋಪಾಲ ಗೌಡ ಮತ್ತು ಶೀಲಾವತಿ ಎನ್ ದಂಪತಿಯ ಪುತ್ರ ಸುಜಿತ್ ಕೆ ಜಿ (92.6169), ದರ್ಬೆಯ ಯಶೋಧರ ಎಸ್ ಮತ್ತು ರಶ್ಮಿ ಟಿ.ಎಂ ದಂಪತಿಯ ಪುತ್ರಿ ಯಶಸ್ವಿ ಶೆಟ್ಟಿ ಎಸ್ (91.9125), ತಿಂಗಳಾಡಿಯ ರವಿನಾರಾಯಣ ಭಟ್ ಎನ್ ಮತ್ತು ವಿದ್ಯಾಸರಸ್ವತಿ ಎನ್ ಆರ್ ದಂಪತಿಯ ಪುತ್ರಿ ಚೈತ್ರ ಭಟ್ ವೈ (90.176), ಸುಳ್ಯದ ಪದ್ಮನಾಭ ಯು ಎಸ್ ಮತ್ತು ರತ್ನಾ ಕುಮಾರಿ ಕೆ ಎಚ್ ದಂಪತಿಯ ಪುತ್ರಿ ಪ್ರತೀಕ್ಷಾ ಯು ಪಿ (89.521), ಮಂಡ್ಯದ ಕುಮಾರ ಕೆ.ಬಿ ಮತ್ತು ರತ್ನಾ ದಂಪತಿಯ ಪುತ್ರ ವರುಣ್ ಕುಮಾರ್ ಕೆ (89.133), ಮಡಿಕೇರಿಯ ತಿಮ್ಮಯ್ಯ ಕೆ.ಎಂ ಮತ್ತು ಶಶಿ ಕೆ. ಓ ದಂಪತಿಯ ಪುತ್ರ ಬಿದ್ದಪ್ಪ ಕೆ ಟಿ (89.1334), ಸಂಪ್ಯದ ಪ್ರಸನ್ನ ಕುಮಾರ್ ರೈ ಮತ್ತು ಜ್ಯೋತಿ ಪಿ ರೈ ದಂಪತಿಯ ಪುತ್ರಿ ತನಿಷಾ ರೈ (85.8166), ಮಡಿಕೇರಿಯ ಕುಶಿಕರ ಬಿ ಎಸ್ ಮತ್ತು ಉದಯ ಕಲಾ ಎನ್ ಎಲ್ ದಂಪತಿಯ ಪುತ್ರ ಪ್ರಜ್ವಲ್ ಬಿ ಕೆ (85.6501) ಇವರುಗಳು ಉತ್ತಮ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here