ಪುತ್ತೂರು: ಮುಸ್ಲಿಂ ಸಮುದಾಯವು ಧಾರ್ಮಿಕ ಚೌಕಟ್ಟು ಮೀರದೆ ಇತರ ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡಬೇಕೆಂದು ಖ್ಯಾತ ಧಾರ್ಮಿಕ ಪಂಡಿತ ಎಂ.ಟಿ ಅಬೂಬಕ್ಕರ್ ದಾರಿಮಿ ಹೇಳಿದರು. ಅವರು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿ ವತಿಯಿಂದ ಸಂಪ್ಯ ಮಸೀದಿ ವಠಾರದಲ್ಲಿ ನಡೆದ ’ಸಕಾಲಿಕ ವಿಷಯದಲ್ಲಿ ಕರ್ಮಶಾಸ್ತ್ರ ವೀಕ್ಷಣೆ ’ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಇತರ ಧರ್ಮಗಳನ್ನು ಗೌರವಿಸುವುದರೊಂದಿಗೆ ಇಸ್ಲಾಂ ಧರ್ಮದ ಯಾವುದೇ ಆಚಾರ ವಿಚಾರ ಸಂಸ್ಕೃತಿಗಳಿಗೆ ಸಾಸಿವೆ ಕಾಳಿನಷ್ಟೂ ಧಕ್ಕೆ ತರದೆ ಜೀವನ ನಡೆಸಬೇಕಾದದ್ದು ವಿಶ್ವಾಸಿಗಳ ಭಾದ್ಯತೆಯೆಂದು ಅವರು ಹೇಳಿದರು. ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರುರವರು ಅಧ್ಯಕ್ಷತೆ ವಹಿಸಿದ್ದರು. ಉಮರ್ ದಾರಿಮಿ ಸಾಲ್ಮರ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಉಮರ್ ಮುಸ್ಲಿಯಾರ್ ನಂಜೆ, ಅಬ್ಬಾಸ್ ಮದನಿ ಪಣೆಮಜಲು, ಅಬೂಬಕ್ಕರ್ ದಾರಿಮಿ, ಸಿರಾಜ್ ಫೈಝಿ ಬಪ್ಪಳಿಗೆ, ಶುಕೂರ್ ದಾರಿಮಿ ಕಾವು, ಅಝೀಝ್ ದಾರಿಮಿ ಕೊಡಾಜೆ, ಮಜೀದ್ ದಾರಿಮಿ ಮಿತ್ತೂರು, ಹಮೀದ್ ಹನೀಫಿ ದರ್ಬೆ, ಹನೀಫ್ ದಾರಿಮಿ ಪಡೀಲ್, ಅಶ್ರಫ್ ದಾರಿಮಿ ಸಂಟ್ಯಾರ್, ಹಸನ್ ಬಾಖವಿ ಮುಕ್ರಂಪಾಡಿ, ಯಾಕೂಬ್ ದಾರಿಮಿ ಸೋಂಪಾಡಿ, ಬದ್ರುದ್ದೀನ್ ರಹ್ಮಾನಿ ಪರ್ಪುಂಜ, ಸಿದ್ದೀಕ್ ಫೈಝಿ ಮೊಟ್ಟೆತ್ತಡ್ಕ, ಆಶ್ಶಾಫಿ ಬಡಕೋಡಿ, ಸಂಪ್ಯ ಮದ್ರಸಾ ಅಧ್ಯಾಪಕ ಅಝೀಝ್ ಮುಸ್ಲಿಯಾರ್, ಮುಸ್ತಫಾ ಫೈಝಿ ಸವಣೂರು, ಹಮೀದ್ ದಾರಿಮಿ ಮಾಡಾವು, ಸಂಪ್ಯ ಜಮಾಅತ್ ಕಮಿಟಿ ಅಧ್ಯಕ್ಷ ಜಲೀಲ್ ಹಾಜಿ, ಸಂಪ್ಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಶಿಹಾಬ್ ಫೈಝಿ, ಅಬೂಬಕ್ಕರ್ ಕಲ್ಲರ್ಪೆ, ಇಬ್ರಾಹಿಂ ಹಾಜಿ ಇದಬೆಟ್ಟು, ಅಬೂಬಕ್ಕರ್ ಸಂಪ್ಯ ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿರುವ ಬೃಹತ್ ಸುನ್ನೀ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಂಇಯ್ಯತುಲ್ ಉಲಮಾ ತಾಲೂಕು ಸಮಿತಿ ಪ್ರ.ಕಾರ್ಯದರ್ಶಿ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿದರು.