ಹಾರಾಡಿ ಶಾಲೆಯಲ್ಲಿ ಮೆಟ್ರಿಕ್ ಮೇಳ – ಮಕ್ಕಳ ಸಂತೆ

0

ಪುತ್ತೂರು: ನಿತ್ಯ ಜೀವನದಲ್ಲಿ ವ್ಯವಹಾರಿಕ ಜ್ಞಾನ, ಅಳತೆ, ಲಾಭ ನಷ್ಟದ ನೈಜ ಅನುಭವ ನೀಡುವ ವಿಶೇಷ ಕಾರ್ಯಕ್ರಮ ಮೆಟ್ರಿಕ್ ಮೇಳ ’ಮಕ್ಕಳ ಸಂತೆ-2023’ ಕಾರ್ಯಕ್ರಮ ಫೆ. 7ರಂದು ಹಾರಾಡಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮನೆಯಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಮಕ್ಕಳು ವ್ಯಾಪಾರ ಮಾಡಿದರು. ಐಸ್‌ಕ್ರೀಮ್, ಪಾನಿಪುರಿ, ಚುರುಮುರಿ, ಪ್ರೂಟ್ಸ್‌ಸಲಾಡ್, ಚಾಕಲೇಟ್, ಸ್ವೀಟ್ ಕಾರ್ನ್, ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳ ವ್ಯಾಪಾರ ಮಕ್ಕಳಿಂದ ನಡೆಯಿತು. ಒಟ್ಟಿನಲ್ಲಿ ಮಕ್ಕಳು ವ್ಯಾಪಾರ ವಹಿವಾಟಿನ ನೈಜ ಅನುಭವ ಪಡೆದು, ತಮ್ಮ ಲಾಭ ನಷ್ಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಶಾಲಾ ಮುಖ್ಯಗುರು ಕೆ.ಕೆ.ಮಾಸ್ಟರ್ ಸ್ವಾಗತಿಸಿ, ಶಿಕ್ಷಕಿ ಗಂಗಾವತಿ ರೈ ವಂದಿಸಿದರು. ವನಿತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here