ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿನ ಕಾಮಧೇನು ಗೋ ಶಾಲೆಯ ಹಸುಗಳನ್ನು ಬೇಸಿಗೆ ತಾಪಮಾನದಿಂದ ತಂಪನ್ನಾಗಿಸಲು ಪುತ್ತೂರಿನ 8 ಭರತನಾಟ್ಯ ನೃತ್ಯ ಶಾಲಾ ಗುರುಗಳಿಂದ 8 ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.
ದೇವಳದ ಗೋಶಾಲೆಗೆ ಫ್ಯಾನಿನ ಅಗತ್ಯ ಇದೆ ಎಂದು ತಿಳಿದಾಗ ನೃತ್ಯಗುರು ಹಾಗೂ ದೇವಸ್ಥಾನದ ನಿತ್ಯ ಕರಸೇವಕರಲ್ಲಿ ಒಬ್ಬರಾದ ಬಿ ಗಿರೀಶ್ ಕುಮಾರ್ ಇವರು ಪುತ್ತೂರು ಆಸು ಪಾಸಿನ ಎಂಟು ನೃತ್ಯ ಗುರುಗಳನ್ನು ಸಂಪರ್ಕಿಸಿ ಇದಕ್ಕೆ ಬೇಕಾದಂತಹ 8 ಫ್ಯಾನನ್ನು ಕೊಡುಗೆಯಾಗಿ ನೀಡಲು ಮುಖ್ಯ ಪಾತ್ರ ವಹಿಸಿದ್ದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಪ್ರಭಾ ಬಿ ಶಂಕರ್, ನೃತ್ಯಗುರುಗಳಾದ ವಿದ್ವಾನ್ ಬಿ. ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಬಿ. ಗಿರೀಶ್ ಕುಮಾರ್, ನೃತ್ಯೋಪಾಸನಾ ಕಲಾಕೇಂದ್ರ ಪುತ್ತೂರು ಇದರ ನೃತ್ಯಗುರು ಶಾಲಿನಿ ಆತ್ಮಭೂಷಣ್, ಮಡಂತ್ಯಾರು ಇದರ ವಿದುಷಿ ಸ್ವಾತಿ ಕಿರಣ್, ಶ್ರೀದೇವಿ ನೃತ್ಯ ರಾಧನ ಕಲಾಕೇಂದ್ರ ಪುತ್ತೂರು ಇದರ ವಿದುಷಿ ರೋಹಿಣಿ ಉದಯ ವೆಂಕಟೇಶ್ ಸಹಿತ ಧನ್ಯತ ಹಾಗೂ ಆಶ್ರಿತ ಬಿ ದೇವಳದ ಸತ್ಯಧರ್ಮ ನಡೆಯಲ್ಲಿ ಫ್ಯಾನ್‌ಗಳನ್ನು ಹಸ್ತಾಂತರಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ನೃತ್ಯ ಶಾಲಾ ಗುರುಗಳನ್ನು ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಸಲ್ಲಿಸಿದರು.
ದಾನಿಗಳು:
ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ಬಿ ದೀಪಕ್ ಕುಮಾರ್, ವಿದುಷಿ ಪ್ರೀತಿ, ವಿದ್ವಾನ್ ಬಿ ಗಿರೀಶ್ ಕುಮಾರ್, ವಿಶ್ವ ಕಲಾನಿಕೇತನ ನೃತ್ಯ ಶಾಲೆಯ ವಿದುಷಿ ನಯನಾ ವಿ. ರೈ, ವಿದುಷಿ ಸ್ವಸ್ತಿಕ ಆರ್ ಶೆಟ್ಟಿ, ವಿದುಷಿ ಆಸ್ತಿಕ ಶೆಟ್ಟಿ, ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ವಿದ್ವಾನ್ ಸುದರ್ಶನ್ ಎಂ ಎಲ್, ವಿದುಷಿ ಸುಮಾ ಆರ್ ಪ್ರಸಾದ್, ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಇದರ ವಿದುಷಿ ವಿದ್ಯಾ ಮನೋಜ್, ಭಾರತೀಯ ನೃತ್ಯ ಕಲಾ ಶಾಲೆ ಪುತ್ತೂರು ಇದರ ವಿದುಷಿ ಶ್ರುತಿ ರೋಷನ್, ನೃತ್ಯೋಪಾಸನಾ ಕಲಾಕೇಂದ್ರ ಪುತ್ತೂರು ಇದರ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್, ದೇವಿಕಿರಣ್ ಕಲಾನಿಕೇತನ, ಮಡಂತ್ಯಾರು ಇದರ ವಿದುಷಿ ಸ್ವಾತಿ ಕಿರಣ್, ಶ್ರೀದೇವಿ ನೃತ್ಯರಾಧನ ಕಲಾಕೇಂದ್ರ ಪುತ್ತೂರು ಇದರ ವಿದುಷಿ ರೋಹಿಣಿ ಉದಯ ವೆಂಕಟೇಶ್ ಅವರು ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದರು.