ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಕುಟುಂಬದಿಂದ ಬನ್ನೂರು ಚರ್ಚ್ ನಿರ್ಗಮಿತ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ರವರಿಗೆ ಸನ್ಮಾನ

0

ಪುತ್ತೂರು: ಕೋರ್ಟ್ ರಸ್ತೆಯ ತಾಲೂಕು ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಫೆ. 5 ರಂದು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್ ರವರ ಮೊಮ್ಮಗ(ಮಗಳ ಮಗ)ನ ನಾಮಕರಣ ಕಾರ್ಯಕ್ರಮದಲ್ಲಿ ಬೆಂಗಳೂರು ಸೈಂಟ್ ಆಂಟನಿ ಫ್ರಾಯರಿ ಚರ್ಚ್ ಗೆ ವರ್ಗಾವಣೆಗೊಳ್ಳುತ್ತಿರುವ ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ರವರನ್ನು ತುಂಬಿದ ಸಭೆಯ ಸಮ್ಮುಖದಲ್ಲಿ ಸನ್ಮಾನಿಸಿ, ವಂ|ಪ್ರಶಾಂತ್ ರವರ ಮುಂದಿನ ಧಾರ್ಮಿಕ ಸೇವೆಗೆ ಶುಭ ಹಾರೈಸಲಾಯಿತು.


ಈ ಸಂದರ್ಭದಲ್ಲಿ ಮೌರಿಸ್ ಮಸ್ಕರೇನ್ಹಸ್ ರವರ ಪತ್ನಿ ಕುಂಬ್ರ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಜ್ಯೂಲಿಯಾನಾ ಮೋರಸ್, ಮಗಳು ಮನೀಷ, ಅಳಿಯ ಆವಿಷ್ ಸಲ್ದಾನ್ಹಾ, ಮಗ ಮೇಗಸ್ ಹಾಗೂ ಅಳಿಯ ಆವಿಷ್ ರವರ ಹೆತ್ತವರಾದ ಹೆರಾಲ್ಡ್ ಸಲ್ದಾನ್ಹಾ, ಐರಿನ್ ಸಲ್ದಾನ್ಹಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here