ಕಾಣಿಯೂರು: ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವದ ಸಂಭ್ರಮದ ಕಾರ್ಯಕ್ರಮಕ್ಕೆ ಫೆ 11ರಂದು ಕೇಂದ್ರ ಗೃಹ ಸಚಿವ, ಕೇಂದ್ರದ ಸಹಕಾರ ಸಚಿವರೂ ಆಗಿರುವ ಅಮಿತ್ ಶಾ ಅವರು ಆಗಮಿಸುವ ಹಿನ್ನಲೆಯಲ್ಲಿ ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ ತೀರ್ಥರಾಮ, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಇಂದಿರಾ ಬಿ.ಕೆ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಸಹಕಾರ ಪ್ರಕೋಷ್ಠದ ಸದಸ್ಯ ಧರ್ಮೇಂದ್ರ ಗೌಡ ಕಟ್ಟತ್ತಾರು, ಜಿ.ಪಂ.ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸುಳ್ಯ ಮಂಡಲದ ಸಮಿತಿ ಸದಸ್ಯೆ ಉಮೇಶ್ವರಿ ಅಗಳಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಸುಳ್ಯ ಮಂಡಲ ಪ್ರಶಿಕ್ಷಣ ಪ್ರಕೋಷ್ಠದ ಪ್ರಮುಖ್ ಗಿರಿಶಂಕರ ಸುಲಾಯ, ತೇಜಕುಮಾರಿ ಉದ್ಲಡ್ಡ, ಗೌರಿ ಮಾದೋಡಿ, ಜಯಂತ ಅಬೀರ, ಪುನಿತ್ ಕುಮಾರ್, ವಿಶ್ವನಾಥ ದೇವಿನಗರ, ಮೋಹನ್ ಅಗಳಿ, ವಸಂತ್ ದಲಾರಿ, ಸದಾಶಿವ ಎಂ, ಬಾಲಕೃಷ್ಣ ಗೌಡ ಇಡ್ಯಡ್ಕ, ಮಹೇಶ್ ಕೆ ಸವಣೂರು, ಪ್ರವೀಣ್ ಚಂದ್ರ ರೈ ಕುಮೇರು, ಸುರೇಶ್ ಬಂಡಾಜೆ, ಸುರೇಶ್ ಓಡಬಾಯಿ ಪುಟ್ಟಣ್ಣ ಗೌಡ ಮುಗರಂಜ, ಚಂಪಾಕುಶಾಲಪ್ಪ ಅಬೀರ, ಗಂಗಮ್ಮ ಗುಜ್ಜರ್ಮೆ, ಅಂಬಾಕ್ಷಿ ಕೂರೇಲು, ವೀರಪ್ಪ ಗೌಡ ಉದ್ಲಡ್ಡ, ರಾಮಯ್ಯ ಗೌಡ, ರಾಮಣ್ಣ ಗೌಡ ಮುಗರಂಜ, ಪದ್ಮಯ್ಯ ಗೌಡ ಅನಿಲ, ಯಶೋದ, ರಾಜೇಶ್ ಮೀಜೆ, ಯಶವಂತ ಗೌಡ ಮತ್ತೀತರರು ಉಪಸ್ಥಿತರಿದ್ದರು.