ಮನರಂಜಿಸಿದ ಪ್ರಮೀಳೆಯರ “ಮೀರಮಣಿ ಕಾಳಗ”

0

ಪುತ್ತೂರು: ಯಕ್ಷಗಾನ ಗಂಡು ಮೆಟ್ಟಿನ ಕಲೆ. ಆದರೆ ಎಲ್ಲಾ ಅಡೆತಡೆಗಳನ್ನು ಮೀರಿ ಗಂಡಿಗೆ ಸಮದಂಡಿಯಾಗಿ ಬೆಳೆದ ಯಕ್ಷ ಪ್ರಮೀಳೆಯರಿಗೇನು ಕೊರತೆಯಿಲ್ಲ. ಸರ್ವಾಂಗ ಸುಂದರ ವರ್ಣರಂಜಿತ ಸಮಷ್ಠಿಕಲೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಈಗ ಮಹಿಳೆಯರೂ ಮಿಂಚುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಹೊಸ ಕವಲು ತೋರಿಸಿಕೊಟ್ಟ “ಧೀ ಶಕ್ತಿ ಮಹಿಳಾ ಯಕ್ಷ ಬಳಗ” ದೇಲಂತಬೆಟ್ಟು ಕನ್ಯಾನದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಿದ ʼವೀರಮಣಿ ಕಾಳಗʼ ಯಕ್ಷಗಾನ ತಾಳಮದ್ದಳೆ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹಿಮ್ಮೇಳದಲ್ಲಿ ಕುಮಾರಿ ಶ್ರೇಯ ಆಚಾರ್ಯ ಅವರ ಭಾಗವತಿಕೆ, ಮದ್ದಳೆಯಲ್ಲಿ ಕೈಯ್ಯಾಡಿಸಿದ ರಾಮದಾಸ ಶೆಟ್ಟಿ ದೇವಸ್ಯ, 2ನೇ ತರಗತಿಯಲ್ಲಿ ಓದುತ್ತಿರುವ ಮಾಸ್ಟರ್ ಅದ್ವೈತ್ ಅವರ ಚೆಂಡೆಯಲ್ಲಿನ ಕೈಚಳಕದ ಮೂಲಕ ತಮ್ಮ ಪ್ರತಿಭೆಯನ್ನು ಮೆರೆಯುವುದರೊಂದಿಗೆ ವೀಕ್ಷಕ ಶೋತ್ರಗಳನ್ನು ರಂಜಿಸಿದರು. ಪದ್ಮ ಕೆ ಆರ್ ಆಚಾರ್ಯ ಹನುಮನಾಗಿ, ಜಯಲಕ್ಷ್ಮಿ ವಿ ಭಟ್ ವೀರಮಣಿಯಾಗಿ, ಪ್ರೇಮ್ ಕಿಶೋರ್ ಪರಮೇಶ್ವರನಾಗಿ, ಶೋಭಾ ಪಿ ಆಚಾರ್ಯ ಮತ್ತು ಶ್ರುತಿ ವಿಸ್ಮಿತ ಶತ್ರುಘ್ನರಾಗಿ, ಹೀರಾ ಉದಯ್‌ ಶ್ರೀ ರಾಮನಾಗಿ, ವರ್ಣರಂಜಿತ ಮಾತುಕತೆಗಳ ಮೂಲಕ ಪ್ರೇಕ್ಷಕರ ಮನಸೆಳೆದರು. ನಾರಾಯಣ ನಾಯಕ್ ಅವರ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here