ಫೆ.10: ಎಡಮಂಗಲದಲ್ಲಿ ಸುಪ್ರಭ ಡೋರ‍್ಸ್, ಅಲ್ಯೂಮಿನಿಯಂ ವರ್ಕ್ಸ್ ಶುಭಾರಂಭ

0

ಕಾಣಿಯೂರು: ಸುಪ್ರಭ ಡೋರ‍್ಸ್ ಮತ್ತು ಅಲ್ಯೂಮಿನಿಯಂ ವರ್ಕ್ಸ್‌ನ 2ನೇ ಶಾಖೆಯಾಗಿ ಎಡಮಂಗಲ ಧರ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಫೆ 10ರಂದು ಶುಭಾರಂಭಗೊಳ್ಳಲಿದೆ. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಉದ್ಘಾಟಿಸಲಿದ್ದು, ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಮಕೃಷ್ಣ ರೈ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪ್ರವೀಣ್, ಕಾಣಿಯೂರು ಸಿ.ಸಿ ಕನ್ಸ್ಟ್ರಕ್ಷನ್ ಚೇತನ್ ಕೆ, ಪಿಡಬ್ಲ್ಯೂಡಿ ಗುತ್ತಿಗೆದಾರ ಮೋಹನ್‌ದಾಸ್ ರೈ, ಎಡಮಂಗಲ ಧರ್ಮಶ್ರೀ ಕಾಂಪ್ಲೆಕ್ಸ್‌ನ ಮಾಲಕರಾದ ಜನಾರ್ದನ ಬಳಕ್ಕಜೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯಲ್ಲಿ ಎಲ್ಲಾ ರೀತಿಯ ಕಿಟಕಿ, ಬಾಗಿಲು, ಫ್ಯಾಬ್ರಿಕೇಶನ್ ಫ್ಲೈವುಡ್ ಮತ್ತು ವುಡ್‌ವರ್ಕ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಪದ್ಮನಾಭ ಆಚಾರ್ಯ ಕಾಣಿಯೂರು ಮತ್ತು ಪ್ರದೀಪ್ ಆಚಾರ್ಯ ಕಾಣಿಯೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here