ನೆಲ್ಯಾಡಿಯ ಶೇಕ್ ಆದಂ ಸಾಹೇಬ್‌ರಿಗೆ `ಸಾವಿತ್ರಿ ಬಾಯಿ ಪುಲೆ’ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

0

ನೆಲ್ಯಾಡಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ, ವಿಜಯಪುರ ಇವರು ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆ ಜನ್ಮದಿನದ ಅಂಗವಾಗಿ ಕೊಡಮಾಡುವ 2022-23ನೇ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ವಗ್ಗ ಕಾವಳಪಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಶೇಕ್ ಆದಂ ಸಾಹೇಬ್ ನೆಲ್ಯಾಡಿ ಅವರು ಆಯ್ಕೆಯಾಗಿದ್ದಾರೆ.

ಫೆ.12ರಂದು ವಿಜಯಪುರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶಿಕ್ಷಕ, ಸಂಘಟಕ, ಕ್ರಿಯಾಶೀಲ ಬೋಧಕರಾಗಿರುವ ಶೇಕ್ ಆದಂ ಸಾಹೇಬ್‌ರವರು ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದಾರೆ. ಇವರಿಗೆ ಈಗಾಗಲೇ ಹಲವು ಪ್ರಶಸ್ತಿಗಳೂ ಲಭ್ಯವಾಗಿದೆ.

LEAVE A REPLY

Please enter your comment!
Please enter your name here