ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆಯಲ್ಲಿ ಧರ್ಮನೇಮೋತ್ಸವ ಆರಂಭ

0

ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ಫೆ.10ರಿಂದ ಫೆ.12ರವರೆಗೆ ನಡೆಯಲಿರುವ ಶ್ರೀ ಧೂಮಾವತಿ-ಬಂಟ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಜಾವತೆ, ಗುಳಿಗ ಹಾಗೂ ಪರಿವಾರ ದೈವಗಳ ಧರ್ಮನೇಮೋತ್ಸವದ ಪ್ರಥಮ ದಿನವಾದ ಫೆ.10ರಂದು ಗಣಪತಿ ಹೋಮ, ನಾಗತಂಬಿಲ, ಚಂಡಿಕಾಹೋಮ, ಹರಿಸೇವೆ ನಡೆದು ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಹಣೆಯೂರುಗುತ್ತು ಡೈಟೀಸ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಕೆ.ಸಿ. ನಾಯ್ಕ್ ಸೇರಿದಂತೆ ಕುಟುಂಬಸ್ಥರು, ಸಂಬಂಧಿಕರ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here