ಫೆ.19:ತಾ|ಸರಕಾರಿ ನೌಕರರ ಸಂಘದ ಕ್ರೀಡಾಕೂಟ -ಫೆ.12ರಂದು ಆಫೀಸರ್ಸ್ ಕ್ಲಬ್ ನಲ್ಲಿ ಶಟಲ್ ಬ್ಯಾಡ್ಮಿಂಟನ್

0

ಪುತ್ತೂರು:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ವಾರ್ಷಿಕ ಕ್ರೀಡಾಕೂಟವು ಫೆ.19 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಜರಗಲಿದ್ದು, ಫೆ.12 ರಂದು ದರ್ಬೆ ಆಫೀಸರ್ಸ್ ಕ್ಲಬ್ ನಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜರಗಲಿದೆ. ಉಳಿದ ಪಂದ್ಯಾವಳಿಗಳು ಫೆ.19 ರಂದು ನಡೆಯಲಿದೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಕೋಶಾಧಿಕಾರಿ ಕೃಷ್ಣ ಬಿ, ಕ್ರೀಡಾ ಕಾರ್ಯದರ್ಶಿ ವೆಂಕಟೇಶ್, ಗೌರವಾಧ್ಯಕ್ಷ ರಾಮಚಂದ್ರ, ಹಿರಿಯ ಉಪಾಧ್ಯಕ್ಷ ಹರಪ್ರಕಾಶ್ ಬೈಲಾಡಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here