ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಧನ್ಯತಾ ಸಭೆ

0

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆದ ದೇವಸ್ಥಾನದ ಪ್ರಥಮ ಜಾತ್ರೋತ್ಸವದ ಧನ್ಯತಾ ಸಭೆಯು ಫೆ.9ರಂದು ಸಂಜೆ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ದೇವಸ್ಥಾನದಲ್ಲಿ ನಡೆದ ಪ್ರಥಮ ಜಾತ್ರೋತ್ಸವವು ಬಹಳಷ್ಟು ಅದ್ಧೂರಿಯಾಗಿ ನೆರವೇರಿದೆ. ಜಾತ್ರೋತ್ಸವವು ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಗಳಲ್ಲಿಯೂ ಸಹಕರಿಸುವಂತೆ ಮನವಿ ಮಾಡಿದರು.
ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಎಲ್ಲರ ಒಗ್ಗೂಡುವಿಕೆಯಿಂದ ಜಾತ್ರೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ನಮ್ಮೊಳಗೆ ಯಾವುದೇ ಗೊಂದಲವಿಲ್ಲದೆ ದೇವಸ್ಥಾನಕ್ಕೆ ಎಲ್ಲರ ಸಹಕಾರ ನಿರಂತರವಾಗಿರಲಿ ಎಂದರು.

ರೂ.5.77ಲಕ್ಷ ಉಳಿಕೆ:
ಪ್ರಥಮ ವರ್ಷದ ಜಾತ್ರೋತ್ಸವದಲ್ಲಿ ದಾನಿಗಳಿಂದ ದೇಣಿಗೆ ಹಾಗೂ ವಿವಿಧ ಸೇವೆಗಳಿಂದ ಒಟ್ಟು ರೂ.13ಲಕ್ಷ ಸಂಗ್ರಹವಾಗಿದೆ. ಜಾತ್ರೋತ್ಸವದ ಎಲ್ಲಾ ವೆಚ್ಚಗಳು ಸೇರಿ ಒಟ್ಟು 7.22ಲಕ್ಷ ಖರ್ಚಾಗಿದ್ದು ರೂ.5.77ಲಕ್ಷ ಉಳಿಕೆಯಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ತಿಳಿಸಿದರು.

ಗೌರವ ಸಲಹೆಗಾರ ಪ್ರಸನ್ನ ಕುಮಾರ್ ಮಾರ್ತ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ಜಗದೀಶ್, ವಿನ್ಯಾಸ್ ಯು.ಎಸ್., ಶಶಿಕಲಾ ನಿರಂಜನ್ ಶೆಟ್ಟಿ, ಪ್ರೇಮ ಶಿವಪ್ಪ ಸಪಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್ ಸ್ವಾಗತಿಸಿದರು. ಗೌರವ ಸಲಹೆಗಾರ ಉದಯ ಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿ, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ರಮೇಶ್ ರೈ ವಂದಿಸಿದರು. ನೂರಾರು ಮಂದಿ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here