ಅಮರಗಿರಿ ಉದ್ಘಾಟಿಸಿದ ಕ್ಷಣವನ್ನು ಟ್ವೀಟ್‌ನಲ್ಲಿ ಹಂಚಿಕೊಂಡ ಅಮಿತ್ ಶಾ

0

ಪುತ್ತೂರು: ಹನುಮಗಿರಿಯಲ್ಲಿ ನಿರ್ಮಿಸಿರುವ ಅಮರಗಿರಿ ಭಾರತ ಮಾತಾ ಮಂದಿರವನ್ನು ಫೆ.11ರಂದು ಉದ್ಘಾಟಿಸಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ರವರು ಕ್ಷೇತ್ರದ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಹನುಮಗಿರಿ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ ರವರು “ಕರ್ನಾಟಕದ ಪುತ್ತೂರಿನಲ್ಲಿರುವ ಈಶ್ವರಮಂಗಲದ ಪಂಚಮುಖಿ ಮಂದಿರದಲ್ಲಿ ಪೂಜೆ ಅರ್ಚನೆ ನೆರವೇರಿಸಿ ದೇಶವಾಸಿಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಅಮರಗಿರಿಯ ಭಾರತ ಮಾತಾ ಮಂದಿರದ ಬಗ್ಗೆ ಉಲ್ಲೇಖಿಸಿ “ಕರ್ನಾಟಕದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಿರ್ಮಿಸಲಾದ ಶ್ರೀ ಭಾರತೀ ಅಮರಜ್ಯೋತಿ ದೇವಸ್ಥಾನವನ್ನು ಉದ್ಘಾಟಿಸಿದ ಅದೃಷ್ಟವಾಗಿದೆ.
ದೇವಾಲಯವು ಮಾತೃಭೂಮಿಯ ಭದ್ರತೆ ಮತ್ತು ಸಮೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತರಿಗೆ ಸಮರ್ಪಿತವಾಗಿದೆ, ಇದು ಹೊಸ ಪೀಳಿಗೆಗೆ ದೇಶಕ್ಕಾಗಿ ಬದುಕಲು ಪ್ರೇರೇಪಿಸುತ್ತದೆ” ಎಂದು ಟ್ವೀಟ್ ನಲ್ಲಿ ಬಣ್ಣಿಸಿದ್ದಾರೆ.

ಅಮರಗಿರಿ ಉದ್ಘಾಟಿಸಿದ ಸಂಭ್ರಮವನ್ನು ಅವರು “ಕರ್ನಾಟಕದ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನಿರ್ಮಿಸಲಾದ ಶ್ರೀ ಭಾರತಿ ಅಮರಜ್ಯೋತಿ ದೇವಸ್ಥಾನವನ್ನು ಉದ್ಘಾಟಿಸಿದ್ದು ಅದೃಷ್ಟ. ಈ ದೇವಾಲಯವು ಮಾತೃಭೂಮಿಯ ಭದ್ರತೆ ಮತ್ತು ಸಮೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತರಿಗೆ ಸಮರ್ಪಿತವಾಗಿದೆ. ಇದು ಹೊಸ ಪೀಳಿಗೆಗೆ ದೇಶಕ್ಕಾಗಿ ಬದುಕಲು ಸ್ಫೂರ್ತಿ ನೀಡುತ್ತದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here