ಪುತ್ತೂರು:2023 ನೇ ಸಾಲಿನಲ್ಲಿ ಸರಕಾರದ ಖೋಟಾದಡಿ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲಿಚ್ಚಿಸುವ ಯಾತ್ರಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಪ್ರಾರಂಭಗೊಳ್ಳಲಿದೆ.
ಪುತ್ತೂರಿನ ಗಲ್ಫ್ ಟೂರ್‍ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರಿಗೆ ಸಂಸ್ಥೆಯ ವತಿಯಿಂದ ಕಳೆದ ಎಂಟು ವರ್ಷಗಳಿಂದ ಸಂಪೂರ್ಣ ಉಚಿತವಾಗಿ ಸಂಸ್ಥೆಯು ಈ ಸೇವೆಯನ್ನು ನೀಡುತ್ತಿದೆ. ಅರ್ಜಿ ಸಲ್ಲಿಸುವವರು ಪಾಸ್‌ಪೋರ್ಟು, ಎರಡು ಕೊರೊನಾ ವ್ಯಾಕ್ಸಿನ್ ಕೊಡಿಸಿದ ಪ್ರಮಾಣಪತ್ರ, ಒಂದು ಫೋಟೋ, ಮತ್ತು ಚೆಕ್‌ನ ಪ್ರತಿಯನ್ನು ನೀಡತಕ್ಕದ್ದು. ಸರಕಾರದ ಸಬ್ಸಿಡಿ ದರದಲ್ಲಿ ಹಜ್‌ಯಾತ್ರೆ ಕೈಗೊಳ್ಳುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಒಂದು ತಿಂಗಳ ಕಾಲವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾನಿ ನಂಬರ್ ಕಚೇರಿ 9449118244, 9980012941, 7411372917 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.