ಪುತ್ತೂರು: ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋದ ವತಿಯಿಂದ ಫೆ. 11ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಅಡಿಕೆ ಬೆಳೆಗಾರರ ಮತ್ತು ಸಹಕಾರಿಗಳ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆಳ್ಳಿಯಿಂದ ಪೋಣಿಸಿದ ಅಡಿಕೆ ಮಾಲೆ ಹಾಕಿ ಗೌರವಿಸಲಾಯಿತು. ಈ ಮಾಲೆಯನ್ನು ಮುಳಿಯ ಜ್ಯುವೆಲ್ಸ್ನಿಂದ ಸಂಘಟಕರು ಖರೀದಿಸಿದ್ದರು.
ಊರಿನಲ್ಲೇ ಬೆಳೆದ ಸಿಂಗಾಪೂರ ಅಡಿಕೆಯನ್ನು ಪೋಣಿಸಿ ಅಡಿಕೆಗೆ ಬೆಳ್ಳಿಯ ಕವಚ ಹಾಕಿ ಮಾಲೆ ಮಾಡಲಾಗಿತ್ತು. ಸುಮಾರು 41 ಗ್ರಾಮ್ ತೂಕದ ಮಾಲೆಯನ್ನು ಸಂಘಟಕರು ಮುಳಿಯದಿಂದ ಖರೀದಿಸಿದ್ದರು. ಮುಳಿಯ ಜ್ಯುವೆಲ್ಸ್ ಕಳೆದ ವರ್ಷ ಕೃಷಿ ಯಂತ್ರ ಮೇಳದಲ್ಲಿ ಚಿನ್ನದಲ್ಲಿ ಪೋಣಿಸಿದ ಅಡಿಕೆ ಹಾರವನ್ನು ಬಿಡುಗಡೆಗೊಳಿಸಿದ್ದರು. ಇದೇ ರೀತಿ ತಾಮ್ರದಲ್ಲೂ ಇಂತಹ ಅಡಿಕೆ ಮಾಲೆ ಮಾಡಬಹುದು. ಪ್ಲಾಸ್ಟಿಕ್ ಹಾರದ ಬದಲು ಇಂತಹ ಹಾರಗಳು ಮುಂದೆ ಗಮನಸೆಳೆಯಲಿವೆ.