ಮುತ್ತಿನ ನಗರಿ ಪುತ್ತೂರಿಗೆ ಕ್ರಿಶಲ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆ- ಫೆ.16:ಬೊಳುವಾರಿನಲ್ಲಿ ಕ್ರಿಶಲ್ ಸ್ಟೀಲ್ಸ್ ಶುಭಾರಂಭ

0

ಪುತ್ತೂರು: ಸ್ಟೀಲ್ ಉದ್ಯಮದಲ್ಲಿ ಮನೆಮಾತಾಗಿರುವ ಕ್ರಿಶಲ್ ಸಮೂಹ ಸಂಸ್ಥೆಗಳಾದ ಬನ್ನೂರು ನೀರ್ಪಾಜೆಯಲ್ಲಿ ಕ್ರಿಶಲ್ ಸ್ಟೀಲ್ ಇಂಡಸ್ಟ್ರೀಸ್, ಬಿ.ಸಿ ರೋಡ್‌ನಲ್ಲಿ ಪ್ರಿಯಾ ಸ್ಟೀಲ್ಸ್, ಬೊಳುವಾರು ಇಲ್ಯಾಸ್ ಮಸ್ಜಿದ್ ಬಿಲ್ಡಿಂಗ್‌ನಲ್ಲಿ ಕ್ರಿಶಲ್ ಸ್ಟೀಲ್ಸ್ ಸಂಸ್ಥೆಗಳು ವ್ಯವಹರಿಸುತ್ತಿದ್ದು ಇದೀಗ ಕ್ರಿಶಲ್ ಸಮೂಹ ಸಂಸ್ಥೆಗಳ ಮತ್ತೊಂದು ಸಂಸ್ಥೆಯು ಮುತ್ತಿನನಗರಿ ಪುತ್ತೂರಿಗೆ ಲೋಕಾರ್ಪಣೆಗೊಳ್ಳಲಿದೆ.

ಬೊಳುವಾರು ಸೂರ್ಯಪ್ರಭಾ ಕಾಂಪ್ಲೆಕ್ಸ್‌ನ ಎದುರುಗಡೆಯ ತಾಜ್ ಕಾಂಪ್ಲೆಕ್ಸ್‌ನಲ್ಲಿ ಸ್ಟೇನ್‌ಲೆಸ್ ಸ್ಟೀಲ್, ಪಾತ್ರೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಕರು ಹಾಗೂ ವಿತರಕ ಸಂಸ್ಥೆ ‘ಕ್ರಿಶಲ್ ಸ್ಟೀಲ್ಸ್’ ಸಂಸ್ಥೆಯು ಫೆ.16 ರಂದು ಶುಭಾರಂಭಗೊಳ್ಳಲಿದ್ದು, ಈ ನೂತನ ಸಂಸ್ಥೆಯು ಗ್ರಾಹಕರಿಗೆ ವಸ್ತುಗಳನ್ನು ಸಗಟು(ಹೋಲ್‌ಸೇಲ್) ಹಾಗೂ ಚಿಲ್ಲರೆ(ರಿಟೇಲ್) ದರದಲ್ಲಿ ಕೈಗೆಟಕುವಂತೆ ನೀಡುತ್ತಿದೆ.

ಸಂಸ್ಥೆಯನ್ನು ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು, ಪ್ರಸ್ತುತ ಬೆಂಗಳೂರಿನ ಸೈಂಟ್ ಆಂಟನಿ ಫ್ರಾಯರಿ ಚರ್ಚ್‌ಗೆ ವರ್ಗಾವಣೆಗೊಳ್ಳಲಿರುವ ವಂ|ಪ್ರಶಾಂತ್ ಫೆರ್ನಾಂಡೀಸ್ ಹಾಗೂ ಬನ್ನೂರು ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ಆಗಮಿಸಲಿರುವ ವಂ|ಬಾಲ್ತಜಾರ್ ಪಿಂಟೋರವರು ಆಶೀರ್ವಚಿಸಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 9482646456, 9740449002 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕ ಕಿರಣ್ ಡಿ’ಸೋಜ ನೀರ್ಪಾಜೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here