ಉಪ್ಪಿನಂಗಡಿ:ಬ್ಯಾಂಕ್ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್

0

ಉಪ್ಪಿನಂಗಡಿ:ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಸಂಭವಿಸಿದ ಘಟನೆ ಫೆ.14ರ ರಾತ್ರಿ ನಡೆದಿದೆ.

ಬ್ಯಾಂಕ್ ಕಚೇರಿಯ ಒಳಗಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನಾಗರಿಕರು ಸ್ಥಳೀಯ ಎಲೆಕ್ಟ್ರಿಷಿಯನ್ ಓರ್ವರನ್ನು ಕರೆಸಿ ಬ್ಯಾಂಕಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಳಿಕ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ಆಗಮಿಸಿ, ಕಚೇರಿ ಬಾಗಿಲು ತೆರೆಸಿ ಒಳಗಡೆ ನೋಡಿದಾಗ ಬ್ಯಾಂಕ್ ಕಚೇರಿಯ ವಯರ್‌ಗಳು ಸುಟ್ಟು ಹೋಗಿರುವುದು ಗಮನಕ್ಕೆ ಬಂದಿದೆ.ನಂತರ ಬ್ಯಾಂಕಿಗೆ ಸಂಬಂಧಿಸಿದ ಎಲೆಕ್ಟ್ರೀಷಿಯನ್‌ಗಳನ್ನು ಕರೆಸಲಾಗಿದ್ದು ಅವರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here