ಫೆ.18: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ.18ರಂದು ರಾತ್ರಿ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ನಡೆಯಲಿರುವುದು.

ಬೆಳಿಗ್ಗೆ ಗಂಟೆ 10ಗಂಟೆಯಿಂದ ಶನಿಪ್ರದೋಷದ ಪ್ರಯುಕ್ತ ಸಾಮೂಹಿಕ ಶನೈಶ್ಚರ ಪೂಜೆಯೂ ಜರಗಲಿದೆ. ಸೇವೆ ಮಾಡಲಿಚ್ಛಿಸುವವರು ಶ್ರೀ ಸಂಸ್ಥಾನದ ಸೇವಾವಿಭಾಗದಲ್ಲಿ ಹೆಸರು ನೋಂದಾಯಿಸಬಹುದು ಎಂದು ಸಂಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here