ಬ್ರೈಡಲ್ ಮೇಕಪ್ ಸ್ಪರ್ಧೆಯಲ್ಲಿ ಪ್ರತಿಭಾ ದಯಾ ಕುಕ್ಕಾಜೆಗೆ ಪ್ರಶಸ್ತಿ

0

ಪುತ್ತೂರು: ಅಖಿಲ ಭಾರತ ಹೇರ್ & ಬ್ಯೂಟಿ ಅಸೋಸಿಯೇಷನ್ ​​ಮಂಗಳೂರು, ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್‌ಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಬ್ರೈಡಲ್ ಮೇಕಪ್ ಸ್ಪರ್ಧೆಯಲ್ಲಿ ಪ್ರತಿಭಾ ದಯಾ ಕುಕ್ಕಾಜೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಮಾಯಾ ಇಂಟರ್‌ನ್ಯಾಶನಲ್ ಹೋಟೆಲ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದಿಂದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು. ಸ್ಪರ್ಧೆಯ ಪೈಕಿ ಬೆಸ್ಟ್ ಓವರ್ ಆಲ್ ಲುಕ್ ಪ್ರಶಸ್ತಿಯನ್ನು ದಿ ಬ್ಯೂಟಿ ಬ್ಲಾಗ್ ಮಾಲಕಿ ಪ್ರತಿಭಾ ದಯಾ ಕುಕ್ಕಾಜೆಯವರು ತಮ್ಮದಾಗಿಸಿಕೊಂಡರು. ಪ್ರತಿಭಾ ಅವರು ಈ ಹಿಂದೆ 2019ರ ಬ್ರೈಡಲ್ ಕಾಂಪಿಟೇಶನ್ ನಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದ್ದರು. 2021ರ ಶ್ರೀ ಶಾರದಾ ಮಾತಾ ಫೊಟೋ ಕಂಟೆಸ್ಟ್ ಸ್ಪರ್ಧೆಯಲ್ಲಿ ಪ್ರತಿಭಾ ಅವರ ಶ್ರೀ ಶಾರದೆಯ ಮೇಕಪ್ ಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಬಹುಮಾನ ಒಲಿದಿತ್ತು. ಸೌಂದರ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರತಿಭಾರವರು ಮಾಣಿಲ ಕುಕ್ಕಾಜೆ ನಿವಾಸಿಯಾಗಿರುವ ಖ್ಯಾತ ಫೊಟೋ ಜರ್ನಲಿಸ್ಟ್, ಡೈಜಿವರ್ಲ್ಡ್ ವಾಹಿನಿಯ ಛಾಯಾಗ್ರಾಹಕ ದಯಾ ಕುಕ್ಕಾಜೆಯವರ ಪತ್ನಿ.

LEAVE A REPLY

Please enter your comment!
Please enter your name here