ಬ್ರೈಡಲ್ ಮೇಕಪ್ ಸ್ಪರ್ಧೆಯಲ್ಲಿ ಅಶ್ವಿನಿ ಪವಿತ್ರ ಆಳ್ವ ಕೈಕಾರ ದ್ವಿತೀಯ

0

ಪುತ್ತೂರು: ಅಖಿಲ ಭಾರತ ಹೇರ್ & ಬ್ಯೂಟಿ ಅಸೋಸಿಯೇಷನ್ ಮಂಗಳೂರು, ಆರ್.ಸಿ.ಒ ಪ್ರೊಫೆಷನಲ್, ಒಲಿವಿಯ ಮತ್ತು ಸಿವಿ ಪ್ರೊಫೆಷನಲ್ ವತಿಯಿಂದ ಮಂಗಳೂರಿನ ಬೆಂದೂರು ವೆಲ್ ನಲ್ಲಿರುವ ಮಾಯಾ ಇಂಟರ್ ನ್ಯಾಶನಲ್ ಹೊಟೇಲ್ ನಲ್ಲಿ ನಡೆದ ಬ್ರೈಡಲ್ ಮೇಕಪ್ ಸ್ಪರ್ಧೆಯಲ್ಲಿ ಪುತ್ತೂರು ಮತ್ತು ಉಪ್ಪಳದಲ್ಲಿ ಅಶ್ವಿನಿ ಬ್ಯೂಟಿಪಾರ್ಲರ್ ದಿರುವ ಅಶ್ವಿನಿ ಪವಿತ್ರ ಆಳ್ವ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.

ಕಾಸರಗೋಡು, ಉಡುಪಿ, ಮಡಿಕೇರಿ ಮತ್ತು ಕಾರವಾರ ಜಿಲ್ಲೆಗಳಿಂದ ಭಾಗವಹಿಸಿದ್ದ 45 ಸ್ಪರ್ಧಿಗಳ ಪೈಕಿ ದ್ವಿತೀಯ ಸ್ಥಾನ ಪಡೆದಿರುವ ಅಶ್ವಿನಿಯವರು ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ, ಉದ್ಯಮಿ ಪವಿತ್ರ ಆಳ್ವರವರ ಪತ್ನಿಯಾಗಿದ್ದು ನಮ್ಮ ಕುಡ್ಲದವರು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರಲ್ಲದೆ ಚರಣ ಸಂಘದವರು ಆಯೋಜಿಸಿದ್ದ ಮೇಕಪ್ ಆರ್ಟಿಸ್ಟ್ ಸ್ಪರ್ಧೆಯಲ್ಲಿ ಅಟ್ರಾಕ್ಟಿವ್ ಮೇಕ್ ಓವರ್ ಆಗಿ ಹೊರಹೊಮ್ಮಿದ್ದರು.

ಮಂಗಳೂರಿನ ಬಂಟರ ಸಂಘದವರು ಆಯೋಜಿಸಿದ್ದ ಶಕ್ತಿ ಸಂಗಮ ಸ್ಪರ್ಧೆಯಲ್ಲಿ ಕೂಡ ಇವರು ಪ್ರಶಸ್ತಿಗೆ ಭಾಜನರಾಗಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಸೌತ್ ಇಂಡಿಯಾ ಇಂಟರ್ ನ್ಯಾಶನಲ್ ಐಕಾನ್ ನ ದ ಬೆಸ್ಟ್ ಮೇಕಪ್-ಆರ್ಟಿಸ್ಟ್ ಇನ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿಯೂ ಇವರು ಪ್ರಶಸ್ತಿ ಗಳಿಸಿದ್ದರು.

LEAVE A REPLY

Please enter your comment!
Please enter your name here