ತಾಯಿ ಮನೆಯಲ್ಲಿದ್ದ ಸಹೋದರಿಯನ್ನು ಗಂಡನ ಮನೆಗೆ ಹೋಗುವಂತೆ ಒತ್ತಾಯಿಸಿ ಸಹೋದರರಿಂದ ಹಲ್ಲೆ- ಆರೋಪ

0

ಪುತ್ತೂರು: ತಾಯಿ ಮನೆಯಲ್ಲಿದ್ದ ಸಹೋದರಿಯನ್ನು ಗಂಡನ ಮನೆಗೆ ಹೋಗುವಂತೆ ಒತ್ತಾಯಿಸಿದ ಸಹೋದರರಿಬ್ಬರು ಹಲ್ಲೆ ನಡೆಸಿ ಘಟನೆ ಬಿಳಿಯೂರು ಗ್ರಾಮದ ಕರುವೇಲು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬಿಳಿಯೂರು ಗ್ರಾಮದ ಕರುವೇಲು ಕಾರ್ಟಸ್ ನಲ್ಲಿ ತಾಯಿ ಮನೆಯಲ್ಲಿದ್ದ ಪುತ್ರಿಯನ್ನು ಆಕೆಯ ಅಣ್ಣ ಹಕೀಮ್ ಮತ್ತು ತಮ್ಮ ಅಬ್ದುಲ್ ಮಜೀದ್ ಎಂಬವರು ಆಕೆಯನ್ನು ಗಂಡನ ಮನೆಗೆ ಹೋಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಸಹೋದರಿಗೆ ಸಹೋದರರಿಬ್ಬರು ಹಲ್ಲೆ ನಡೆಸಿ, ಜೀವ ಬೆದರಿಯೊಡ್ಡಿರುವುದಾಗಿ ಆರೋಪಿಸಲಾಗಿದೆ.

ಘಟನೆ ಕುರಿತು ಮಹಿಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here