ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜಾತ್ರೋತ್ಸವ ಸಮಿತಿಗೆ ಆಯ್ಕೆ
ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾರ್ನೂಜಿ

0

ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.8 ಮತ್ತು 9ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಆಯ್ಕೆಯಾಗಿದ್ದಾರೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರವಿ ಶೆಟ್ಟಿ ನೇಸರ ಕಂಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉಮೇಶ ಗೌಡ ಗುತ್ತಿನಪಾಲು, ಜಯಪ್ರಸಾದ ಅಂಬಟ, ಸೇಸಪ್ಪ ಶೆಟ್ಟಿ ಪೊನೋನಿ, ಗೌರವ ಸಲಹೆಗಾರರಾಗಿ ಭಾಸ್ಕರ ಆಚಾರ್ ಹಿಂದಾರ್, ಮುರಳೀಧರ ಭಟ್ ಬಂಗಾರಡ್ಕ, ಹೆಗ್ಗಪ್ಪ ರೈ ಪೊನೋನಿ, ಪ್ರಸನ್ನ ಭಟ್ ಪಂಚವಟಿ, ಸುಧೀರ್ ಶೆಟ್ಟಿ ನೇಸರ ಕಂಪ, ಬಾಲಕೃಷ್ಣ ಕಣ್ಣಾರಾಯ, ಜಯಪ್ರಕಾಶ್ ರೈ ಚೆಲ್ಯಡ್ಕ, ಅಶೋಕ್ ಕುಮಾರ್ ಪುತ್ತಿಲ, ಶ್ರೀಕಾಂತ ಆಚಾರ್ ಹಿಂದಾರು, ರಘುನಾಥ ಶೆಟ್ಟಿ ಪೊನೋನಿ, ಶ್ರೀರಂಗ ಶಾಸ್ತ್ರಿ ಮಣಿಲ, ವೆಂಕಟೇಶ್ ಅಯ್ಯಂಗಾರ್ ಹಾಗೂ ಗುಲಾಬಿ ಶೆಟ್ಟಿ ಕಂಪರವರನ್ನು ಆಯ್ಕೆ ಮಾಡಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ ಸ್ವಾಗತಿಸಿ, ರಾಮಣ್ಣ ಗೌಡ ವಂದಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here