ಪುತ್ತೂರು: ಕುರಿಯ ಗ್ರಾಮದ ಪೊಯ್ಯೆಯಲ್ಲಿ ನೂತನ ನಿರ್ಮಾಣಗೊಂಡಿರುವ ಶ್ರೀ ನಾಗರಕ್ತೇಶ್ವರಿ ಸಾನಿಧ್ಯದಲ್ಲಿ ಶ್ರೀ ನಾಗರಕ್ತೇಶ್ವರಿ ಕಟ್ಟೆ, ನಾಗನ ಕಟ್ಟೆ, ಗುಳಿಗನ ಕಟ್ಟೆ ಹಾಗೂ ಮಂತ್ರವಾದಿ ಗುಳಿಗನ ಕಟ್ಟೆಯ ಪ್ರತಿಷ್ಠಾ ಕಲಶಾಭಿಷೇಕವು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಫೆ.19 ರಂದು ನಡೆಯಲಿದೆ.
ಫೆ.18ರಂದು ಸಂಜೆ ಆಲಯ ಪರಿಗ್ರಹ, ಪ್ರಾರ್ಥನೆ, ಸ್ಥಳ ಶುದ್ಧಿ, ಸ್ವಸ್ತಿ ಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಷಾಲಬಲಿ ನಡೆಯಲಿದೆ. ಫೆ.19 ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾ ಹೋಮ, ನಾಗ ರಕ್ತೇಶ್ವರಿ, ನಾಗ ದೇವರ ಪ್ರತಿಷ್ಠೆ, ಗುಳಿಗ ಹಾಗೂ ಮಂತ್ರವಾದಿ ಗುಳಿಗನ ಪ್ರತಿಷ್ಠೆ ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೊಯ್ಯೆ ಕುಟುಂಬಸ್ಥರು ಹಾಗೂ ಬಂಧುಮಿತ್ರರು ಊರಿನ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.