ಪುತ್ತೂರು: ಎಸ್‌ಎಸ್‌ಎಫ್ ತಿಂಗಳಾಡಿ ಶಾಖೆ ಇದರ ವಾರ್ಷಿಕ ಮಹಾಸಭೆ ಉಸ್ಮಾನ್ ಹಾಜಿ ಅಂಙತ್ತಡ್ಕರವರ ಮನೆಯಲ್ಲಿ ನಡೆಯಿತು. ಸಿಯಾರುದ್ದೀನ್ ಹಿಮಮಿ ದುಆ ನಡೆಸಿದರು. ಸಿರಾಜ್ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಬಾಷಿತ್ ದರ್ಬೆ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿಯಾರುದ್ದೀನ್ ಹಿಮಮಿ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ ತಿಂಗಳಾಡಿ ಹಾಗೂ ಕೋಶಾಧಿಕಾರಿಯಾಗಿ ನೌಶಾದ್ ಅಂಙತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಬಾಶಿತ್ ದರ್ಬೆಯವರನ್ನು ಕ್ಯಾಂಪಸ್ ಕಾರ್ಯದಶಿಯನ್ನಾಗಿ ಆಯ್ಕೆ ಮಾಡಲಾಯಿತು. ಉಪಸಮಿತಿಗಳಾದ ದಅವಾ ಕಾರ್ಯದರ್ಶಿಯಾಗಿ ಸಿನಾನ್ ಹನೀಫಿ, ವಿಸ್ಡಂ ಕಾರ್ಯದರ್ಶಿಯಾಗಿ ಜವಾದ್, ಕಲ್ಚರಲ್ ಕಾರ್ಯದರ್ಶಿಯಾಗಿ ಆಶಿಕ್, ರೀಡ್ ಪ್ಲಸ್ ಕಾರ್ಯದರ್ಶಿಯಾಗಿ ತೌಷೀಕ್, ರೈನ್ಬೋ ಕಾರ್ಯದರ್ಶಿಯಾಗಿ ತಮೀಮ್, ಕ್ವಾಲಿಟಿ ಡೆವಲಪ್ಮೆಂಟ್ ಕಾರ್ಯದರ್ಶಿಯಾಗಿ ಹರ್ಷದ್ ಹಾಗೂ ಮೀಡಿಯಾ ಕಾರ್ಯದರ್ಶಿಯಾಗಿ ಸಹದ್‌ರವರನ್ನು ಆಯ್ಕೆ ಮಾಡಲಾಯಿತು.
ಶಫೀಕ್ ಮಾಸ್ಟರ್, ಮುಜೀಬ್, ಆರಿಫ್, ಬಾಹಿಸ್, ಶಿಹಾಬ್ ಹಾಗೂ ಯಾಕೂಬ್‌ರವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು. ಸೆಕ್ಟರ್ ವೀಕ್ಷಕರಾಗಿ ಇಲ್ಯಾಸ್ ಕಟ್ಟತ್ತಾರು ಹಾಗೂ ಇರ್ಷಾದ್ ಗಟ್ಟಮನೆ ಕಾರ್ಯನಿರ್ವಹಿಸಿದರು. ಸಿಯಾರುದ್ದೀನ್ ಹಿಮಮಿ ಸ್ವಾಗತಿಸಿ ವಂದಿಸಿದರು.