ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ|ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಪ್ರೊ|ಎಡ್ವಿನ್ ಡಿ’ಸೋಜರವರು ಮಂಡಿಸಿದ ‘ಎ ಸಿಸ್ಟಮ್ಯಾಟಿಕ್ ಆಂಡ್ ಮೆಕ್ಯಾನಿಸ್ಟಿಕ್ ಸ್ಟಡಿ ಆಫ್ ದ ಬಯೋಆಕ್ಟೀವ್ ಮೊಲಿಕ್ಯೂಲ್ಸ್ ಬೈ ಇಲೆಕ್ಟ್ರೋಕೆಮಿಕಲ್ ಸೆನ್ಸರ್ಸ್ ಎ ವೋಲ್ಟಾ ಮೆಟ್ರಿಡ್ ಸ್ಟಡಿ’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಜೆ.ಜಿ ಮಂಜುನಾಥ್‌ರವರು ಮಾರ್ಗದರ್ಶನ ನೀಡಿರುತ್ತಾರೆ.
ಡಾ|ಎಡ್ವಿನ್ ಡಿ’ಸೋಜರವರು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿಯೂ, ಪ್ರಸ್ತುತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಸಂಜಯನಗರ ಎಂಬಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದಾರೆ.