ಫೆ.22 : ಚಿಕ್ಕಮುಡ್ನೂರು ಪುಳುವಾರು ಗ್ರಾಮ ದೈವ, ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಪುಳುವಾರು ಗ್ರಾಮ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ.22ರಂದು ದೊಂಪದ ಬಲಿ, ಗ್ರಾಮದೈವ ಶಿರಾಡಿ ಕಲ್ಕುಡ, ಪಿಲಿಭೂತ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.

ಬೆಳಿಗ್ಗೆ ಗಣಪತಿ ಹೋಮ, ದೈವಗಳಿಗೆ ತಂಬಿಲ, ಹೊರೆಕಾಣಿಕೆ ಸಮರ್ಪಣೆ, ರಾತ್ರಿ ದೈವಗಳ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ, ಗೊಂದೋಳು ಪೂಜೆ, ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ರೈ ಕುಂಬುರ್ಗಗುತ್ತು, ಗೌರವಾಧ್ಯಕ್ಷ ಡಾ.ಅಶೋಕ್ ಪಡಿವಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here