ಲಯನ್ಸ್ ಪುತ್ತೂರು, ಲಯನ್ಸ್ ಪುತ್ತೂರ‍್ದ ಮುತ್ತು, ಲಿಯೋ ಪುತ್ತೂರ‍್ದ ಮುತ್ತುವಿಗೆ ಜಿಲ್ಲಾ ರಾಜ್ಯಪಾಲ ಅಧಿಕೃತ ಭೇಟಿ

0

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಸಿಗುವಂತಾಗಬೇಕು-ಸಂಜೀತ್ ಶೆಟ್ಟಿ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ದೊಡ್ಡ ದೊಡ್ಡ ಸೇವೆ ಮಾಡಲು ಸಾಧ್ಯವಾಗದಿದ್ದರೂ ಸಣ್ಣ ಸಣ್ಣ ಸೇವೆ ಮಾಡುತ್ತಾ ಸಮಾಜದ ಹೆಗ್ಗಳಿಕೆಗೆ ಪಾತ್ರರಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸೇವೆ ಸಿಗುವಂತಾಗಬೇಕು ಎಂದು ಲಯನ್ಸ್ ಜಿಲ್ಲೆ ೩೧೭ಡಿ ಇದರ ಜಿಲ್ಲಾ ರಾಜ್ಯಪಾಲ ಪಿಎಂಜಿಎಫ್ ಸಂಜೀತ್ ಶೆಟ್ಟಿರವರು ಹೇಳಿದರು.

ಲಯನ್ಸ್ ಜಿಲ್ಲೆ ೩೧೭ಡಿ, ರೀಜನ್ ೭, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು, ಲಿಯೋ ಕ್ಲಬ್ ಪುತ್ತೂರ‍್ದ ಮುತ್ತುವಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ಫೆ.೧೭ ರಂದು ಜರಗಿದ್ದು, ಸಂಜೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಯನ್ನು ಹುಟ್ಟಿ ಹಾಕುವುದು ಮುಖ್ಯವಲ್ಲ ಆದರೆ ಹುಟ್ಟಿ ಹಾಕಿದ ಸಂಸ್ಥೆಯನ್ನು ಮುನ್ನೆಡೆಸುವುದು ಬಹಳ ಮುಖ್ಯವಾಗುತ್ತದೆ. ಲಯನ್ಸ್ ಸಂಸ್ಥೆಯು ೨೨೦ ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು ಅದು ಜಾತಿ, ಧರ್ಮ, ಮತ ಮೀರಿ ಮುನ್ನೆಡೆಯುತ್ತಿದೆ. ಲಯನ್ಸ್‌ನ ನಾಲ್ಕು ಕಂದಾಯ ಜಿಲ್ಲೆಗಳಲ್ಲಿನ ಸದಸ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಮಾತನಾಡಿ, ಲಯನ್ಸ್ ಪ್ರಾಂತ್ಯದಲ್ಲಿ ಪುತ್ತೂರಿನ ಲಯನ್ಸ್ ಸಂಸ್ಥೆ ಉತ್ತಮ ಸಮಾಜಮುಖಿ ಚಟುವಟಿಕೆಗಳನ್ನು ಮಾಡುವ ಮೂಲಕ ಹೆಸರು ಗಳಿಸಿದೆ. ಇತ್ತೀಚೆಗೆ ನಡೆದ ಪ್ರಾಂತ್ಯ ಸಮ್ಮೇಳನ ಲಯನ್ಸ್ ಸದಸ್ಯರ ಭಾಗವಹಿಸುವಿಕೆಯಿಂದ ಯಶಸ್ವಿ ಆಗಿದ್ದು ಇದರ ಸವಿನೆನಪಿಗೆ ೫೩ ವರ್ಷದ ಲಯನ್ಸ್ ಕ್ಲಬ್ ನ ಲಯನ್ಸ್ ಸೇವಾ ಮಂದಿರದ ಸಭಾಂಗಣಕ್ಕೆ ರೂ.೩ ಲಕ್ಷ ವೆಚ್ಚದಲ್ಲಿ ಟೈಲ್ಸ್ ಅಳವಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಭಾಂಗಣದ ವೇದಿಕೆಗೂ ಟೈಲ್ಸ್ ಅಳವಡಿಸಲಿದ್ದೇವೆ ಎಂದರು.

ಲಯನ್ಸ್ ಪೂರ್ವ ರಾಜ್ಯಪಾಲ ಡಾ.ಗೀತಪ್ರಕಾಶ್ ಮಾತನಾಡಿ, ಈ ಪ್ರಾಂತ್ಯದಲ್ಲಿ ಕ್ರಿಯಾಶೀಲವಾಗಿರುವ ಎರಡು ಕ್ಲಬ್ ಕೊಟ್ಟಿರುವ ಕಾವು ಕ್ಲಬ್ ಪ್ರಶಂಸನೀಯ. ಮಗು ಹೇಗೆ ಅಂಬೆಗಾಲಿಡುತ್ತಾ ಒಂದೇ ವರ್ಷದಲ್ಲಿ ನಡೆಯಲು ಕಲಿಯುತ್ತದೆಯೋ ಹಾಗೆಯೇ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಭಾರೀ ವೇಗದಲ್ಲಿ ಬೆಳಕಿಗೆ ಬಂದ ಹಾಗಿದೆ ಎಂದರು.
ಲಯನ್ಸ್ ವಲಯಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಮಾತನಾಡಿ, ಪುತ್ತೂರಿನಲ್ಲಿ ಆರ್ಥಿಕವಾಗಿ ಇರುವಂತಹ ಕ್ಲಬ್ ಗಳು ಕಡಿಮೆ ಇದ್ದರೂ ಜನರ ಹೃದಯವನ್ನು ತಟ್ಟುವಂತಹ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಬಹಳ ಮುಂಚೂಣಿಯಲ್ಲಿದೆ. ನಾನು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕ್ಲಬ್ ನ ಸ್ಥಾಪಕಾಧ್ಯಕ್ಷನಾಗಿದ್ದರೂ ಕ್ಲಬ್ ಎರಡೇ ವರ್ಷದಲ್ಲಿ ಅದ್ವಿತೀಯ ಸಾಧನೆ ಮಾಡಿದೆ ಮಾತ್ರವಲ್ಲ ತಾನು ಲಯನ್ಸ್ ವಲಯಾಧ್ಯಕ್ಷನಾಗಿ ಗುರುತಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಹಳೇ ಬೇರು, ಹೊಸ ಚಿಗುರು ಎಂಬಂತೆ ಕ್ಲಬ್ ಮುಂದಿನ ದಿನಗಳಲ್ಲಿ ಹೊಸತನ ಮೂಡಿಸುವಲ್ಲಿ ಸಹಕಾರಿತಾಗಬೇಕಾಗಿದೆ ಎಂದರು.

ಹೊಸ ಸದಸ್ಯರ ಸೇರ್ಪಡೆ:
ಲಯನ್ಸ್ ಕ್ಲಬ್ ಪುತ್ತೂರು ಇದಕ್ಕೆ ಶ್ರೀಮತಿ ನಳಿನಿ ಲಕ್ಷ್ಮಣ್ ಬಪ್ಪಳಿಗೆಯವರನ್ನು ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದಕ್ಕೆ ವಿದ್ಯಾಮಾತಾ ಅಕಾಡೆಮಿಯ ಮುಖ್ಯಸ್ಥ ಭಾಗ್ಯೇಶ್ ರೈಯವರನ್ನು ನೂತನ ಸದಸ್ಯರನ್ನಾಗಿ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಹಾಗೂ ಶ್ರೀಮತಿ ಪ್ರಗತಿ ಸಂಜೀತ್ ಶೆಟ್ಟಿರವರು ಲಯನ್ಸ್ ಪಿನ್ ತೊಡಿಸಿ ಅಧಿಕೃತವಾಗಿ ಬರಮಾಡಿಕೊಂಡರು. ಲಯನ್ಸ್ ಕ್ಲಬ್ ಪುತ್ತೂರು ಸದಸ್ಯೆ ವತ್ಸಲಾ ರಾಜ್ಞಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸದಸ್ಯ ಚಂದ್ರಶೇಖರ್ ಪಿ.ರವರು ನೂತನ ಸದಸ್ಯರ ಪರಿಚಯ ಮಾಡಿದರು.

ಸನ್ಮಾನ:
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೧೮ ಅಂಕ ಗಳಿಸಿದ ಪುತ್ತೂರು ಲಯನ್ಸ್ ಕ್ಲಬ್ ಸದಸ್ಯ ಗಣೇಶ್ ಶೆಟ್ಟಿರವರ ಪುತ್ರಿ ಲೇಖಾ ಶೆಟ್ಟಿ, ಅರವಿಂದ ಭಗವಾನ್‌ರವರ ಪುತ್ರಿ ಕೃಪಾ ರೈ ಎಂ, ಸಮಾಜಸೇವೆಯಲ್ಲಿ ಬಾವಿಗೆ ಬಿದ್ದಂತಹ ವೃದ್ಧೆಯೋರ್ವರನ್ನು ಸ್ವತಹ ಬಾವಿಗಿಳಿದು ರಕ್ಷಿಸಿದ ನಿವೃತ್ತ ಅಂಚೆ ವಿತರಕ ನಾರಾಯಣ ಪಡೀಲು, ವೈದ್ಯ ಕ್ಷೇತ್ರದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಡಾ.ಯದುರಾಜ್, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ಮೊಟ್ಟೆತ್ತಡ್ಕ ನಿವಾಸಿ ಡಾ.ವಜೀದಾ ಬಾನು, ರಾಷ್ಟ್ರಮಟ್ಟದ ಕಲಾ ಮೇಳಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಗೌರವಗಳನ್ನು ಸಂಪಾದಿಸಿದ ಚಿತ್ರಕಲಾ ಶಿಕ್ಷಕ ಉಮೇಶ್ ಪಿ.ಎಂ, ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಜೇಶ್, ಆಂಗ್ಲ ಭಾಷೆಯಲ್ಲಿನ ಕವನ ಸಂಕಲನವು ಪಠ್ಯ ಪುಸ್ತಕದಲ್ಲಿ ಪ್ರಕಟವಾಗಿದ್ದು, ಈ ಕವನ ಸಂಕಲನವನ್ನು ರಚಿಸಿದ ದಿವಿತ್ ರೈರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೂರ್ವ ರಾಜ್ಯಪಾಲರ ತಿಂಗಳ ದಿನದ ಅಂಗವಾಗಿ ಪೂರ್ವ ರಾಜ್ಯಪಾಲ ಡಾ.ಗೀತಪ್ರಕಾಶ್‌ರವರಿಗೆ ಅಭಿನಂದನಾ ಠರಾವು ಸಲ್ಲಿಸಲಾಯಿತು.

ಜಿಲ್ಲಾ ಕ್ಯಾಬಿನೆಟ್ ಸಮಿತಿ ಸದಸ್ಯರಾದ ಕುಡ್ಪಿ ಅರವಿಂದ್ ಶೆಣೈ, ಎಚ್.ಎಂ ತಾರಾನಾಥ್ ಕೊಪ್ಪರವರು ಸಂದರ್ಭೋಚಿತವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಪುತ್ತೂರು ಅಧ್ಯಕ್ಷ ಕೆ.ಕೇಶವ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಶ್ರೀ ನಾಯ್ಕ್ ಪ್ರಾರ್ಥಿಸಿದರು. ಡಾ.ಎ.ಕೆ ರೈ ಧ್ವಜವಂದನೆ ನೆರವೇರಿಸಿದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಪುತ್ತೂರು ಕಾರ್ಯದರ್ಶಿ ಗಣೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕಾರ್ಯದರ್ಶಿ ಮೋಹನ್ ನಾಯಕ್, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಕಾರ್ಯದರ್ಶಿ ಲೆರಿಸ್ಸ ಮಸ್ಕರೇನ್ಹಸ್ ರವರು ಆಯಾ ಕ್ಲಬ್‌ಗಳ ವರದಿ ವಾಚಿಸಿದರು. ಲಿಯೋ ಕ್ಲಬ್ ಪುತ್ತೂರ‍್ದ ಮುತ್ತು ಅಧ್ಯಕ್ಷೆ ರಂಜಿತಾ ಶೆಟ್ಟಿರವರು ಜಿಲ್ಲಾ ರಾಜ್ಯಪಾಲರ ಪರಿಚಯ ಮಾಡಿದರು. ಮಂಜುನಾಥ್ ಎಂ, ಚಂದ್ರಶೇಖರ ಪಿ, ರವೀಂದ್ರ ಪೈ, ಸುಮಂಗಲಾ ಶೆಣೈ, ವತ್ಸಲಾ ರಾಜ್ಞಿ, ಪ್ರೇಮಲತಾ ರಾವ್‌ರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಎಲ್‌ಸಿಎಫ್ ಸಂಯೋಜಕ ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಕಲಾವಿದ ಉಮೇಶ್ ಪಿ.ಎಂರಿಂದ ಜಿಲ್ಲಾ ರಾಜ್ಯಪಾಲ ದಂಪತಿಗಳ ಭಾವಚಿತ್ರ ಅರ್ಪಣೆ..
ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ವತಿಯಿಂದ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಸಂಜೀತಾ ಶೆಟ್ಟಿ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನಿಂದ ಸನ್ಮಾನಿತಗೊಂಡ ಚಿತ್ರ ಕಲಾವಿದ ಉಮೇಶ್ ಪಿ.ಎಂರವರ ಕೈ ಚಳಕದಿಂದ ನಿರ್ಮಾಣಗೊಂಡ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ದಂಪತಿಯ ಭಾವಚಿತ್ರವನ್ನು ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ದಂಪತಿಗೆ ಅರ್ಪಿಸಲಾಯಿತು.

ಡಿಜಿ ಕಾರ್ಯಕ್ರಮಗಳು..
-ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿಯವರಿಗೆ ಸ್ವಾಗತ
-ದೇವಸ್ಥಾನದಲ್ಲಿ ದೇವಸ್ಥಾನದ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರ ಉಪಸ್ಥಿತಿಯಲ್ಲಿ ಪೂಜೆ, ಪ್ರಸಾದ ಸ್ವೀಕಾರ
-ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ವತಿಯಿಂದ ನಿರ್ಮಿಸಲ್ಪಟ್ಟ ಪುತ್ತೂರು ಬಸ್ಸು ನಿಲ್ದಾಣ ಬಳಿ ರಿಕ್ಷಾ ನಿಲ್ದಾಣದ ಉದ್ಘಾಟನೆ
-ಬೆದ್ರಾಳ ಹಾಗೂ ಕೆದಂಬಾಡಿ ಕಟ್ಟತ್ತಾರು ಲಯನ್ಸ್ ಜ್ಯೋತಿ ಉದ್ಘಾಟನೆ
-ಮುಂಡೂರು ಸರಕಾರಿ ಶಾಲೆಗೆ ನಾಮಫಲಕ ಕೊಡುಗೆಯ ಉದ್ಘಾಟನೆ
-ಮಧ್ಯಾಹ್ನ ಬೀರಮಲೆಯಲ್ಲಿ ಪ್ರಜ್ಞಾ ಸೇವಾಶ್ರಮದಲ್ಲಿ ವಿಶೇಷಚೇತನರೊಂದಿಗೆ ಸಹ ಭೋಜನ
-ಸಂಜೆ ರಾಮಕೃಷ್ಣ ಆಶ್ರಮದಲ್ಲಿ ಆಶ್ರಮದ ನಿವಾಸಿಗಳೊಂದಿಗೆ ಉಪಹಾರ ಸೇವನೆ

LEAVE A REPLY

Please enter your comment!
Please enter your name here