ಬೆಟ್ಟಂಪಾಡಿ: ಇಲ್ಲಿನ ಮಡ್ಯಂಪಾಡಿ ತರವಾಡು ಮನೆಯಲ್ಲಿ ದೇವರ ಮತ್ತು ದೈವಗಳ ವಾರ್ಷಿಕ ಆರಾಧನೆ, ದೈವಗಳಿಗೆ ತಂಬಿಲ ಹಾಗೂ ನೇಮೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ, ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆಯವರ ನೇತೃತ್ವದಲ್ಲಿ ಫೆ. 19 ರಿಂದ ಮೊದಲ್ಗೊಂಡು ಫೆ. 22 ರವರೆಗೆ ನಡೆಯಲಿದೆ.
ಫೆ. 19 ರಂದು ನಾಗತಂಬಿಲ, ಮುಡಿಪುಸೇವೆ, ತಂಬಿಲ, ರಾತ್ರಿ ಉಳ್ಳಾಕುಲು ಭಂಡಾರ ಏರುವ ಕಾರ್ಯಕ್ರಮ ನಡೆಯಲಿದೆ. ಫೆ. 20 ರಂದು ಉಳ್ಳಾಕ್ಲು ದೈವದ ನೇಮ ನಡೆದು ರಾತ್ರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಪಿಲಿಚಾಮುಂಡಿ ದೈವದ ಭಂಡಾರ ಮಡ್ಯಂಪಾಡಿ ತರವಾಡಿಗೆ ಬಂದು ರಾತ್ರಿ ಪಿಲಿಚಾಮುಂಡಿ ನೇಮ ನಡೆಯಲಿದೆ.
ಫೆ. 21 ರಂದು ಸಂಜೆ ಗುಳಿಗ ದೈವ, ರಾತ್ರಿ ಕೊರತಿ ದೈವ ಹಾಗೂ ಪಂಜುರ್ಲಿ ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಲಿದೆ. ಫೆ. 22 ರಂದು ಬೆಳಿಗ್ಗೆ ಧರ್ಮದೈವ ಶ್ರೀ ಧೂಮಾವತಿ ದೈವದ ನೇಮ ನಡೆಯಲಿದೆ ಎಂದು ಕುಟುಂಬದ ಯಜಮಾನ ಬಾಲಕೃಷ್ಣ ಆಳ್ವ ಪುಡ್ಕಾಜೆ ಮತ್ತು ಮಡ್ಯಂಪಾಡಿ, ಕೆದಂಬಾಡಿ, ಡೆಮ್ಮಂಗರ, ಪುಡ್ಕಾಜೆ, ತೋಟದಮೂಲೆ ಹಾಗೂ ಮಿತ್ತಡ್ಕ ಕುಟುಂಬ ಶಾಖೆಯ ಕುಟುಂಬಸ್ಥರು ಹಾಗೂ ಶ್ರೀ ದೈವಗಳ ಸೇವಾ ಸಮಿತಿಯವರು ತಿಳಿಸಿದ್ದಾರೆ.