ಫೆ.22: ಮಂಗಳೂರಿನಲ್ಲಿ ಶಿಲ್ಪಾ’ಸ್ ಹೆಲ್ತ್ ಕೇರ್ ಶುಭಾರಂಭ

0

ಪುತ್ತೂರು: ಮಂಗಳೂರು ರಥಬೀದಿಯ ಹೂವಿನ ಮಾರುಕಟ್ಟೆ ಬಳಿಯ ಅನಂತೇಶ್ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶಿಲ್ಪಾ’ಸ್ ಹೆಲ್ತ್ ಕೇರ್ ಫೆ.22ರಂದು ಬೆಳಿಗ್ಗೆ 10ಕ್ಕೆ ಶುಭಾರಂಭಗೊಳ್ಳಲಿದೆ. ಮಾ. ಸಮನ್ವಯ್ ಊರುಬೈಲು ರಿಬ್ಬನ್ ಕತ್ತರಿಸಲಿದ್ದು ಹೊಸದಿಗಂತ ಪತ್ರಿಕೆಯ ಸಿಇಓ ಪ್ರಕಾಶ್ ಪಿ.ಎಸ್., ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಜಗನ್ನಾಥ ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ ಎಂದು ಮಾಲಕಿ ಡಾ. ಶಿಲ್ಪಾ ಶೆಣೈ ತಿಳಿಸಿದ್ದಾರೆ.

ಪುತ್ತೂರು ದರ್ಬೆಯ ಸುಬ್ರಾಯ ಶೆಣೈ ಮತ್ತು ಶಾಂತಿ ಶೆಣೈಯವರ ಪುತ್ರಿಯಾಗಿರುವ ಡಾ.ಶಿಲ್ಪಾರವರು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮತ್ತು ಶೋಭಾ ಶಿವಾನಂದರವರ ಪುತ್ರ ಶ್ರೇಯಸ್ ಊರುಬೈಲು ಅವರ ಪತ್ನಿಯಾಗಿದ್ದು ಈ ಹಿಂದೆ ಸುಳ್ಯದಲ್ಲಿ ಶಿಲ್ಪಾ ಡೆಂಟಲ್ ಕೇರ್ ಹೊಂದಿದ್ದರು. ಪ್ರಸ್ತುತ ಮಂಗಳೂರಿನಲ್ಲಿ ಆರಂಭವಾಗಲಿರುವ ಶಿಲ್ಪಾ’ಸ್ ಹೆಲ್ತ್ ಕೇರ್ ಪಾಲಿಕ್ಲಿನಿಕ್ ನಲ್ಲಿ ಪ್ರಾರಂಭಿಕ ಹಂತದಲ್ಲಿ ಚರ್ಮರೋಗ ತಜ್ಞರು, ದಂತ ವೈದ್ಯರು ಲಭ್ಯರಾಗಲಿದ್ದು ಒಂದು ತಿಂಗಳ ನಂತರ ಮಕ್ಕಳ ತಜ್ಞರೂ ಲಭ್ಯರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here