ಪುತ್ತೂರು: ಕೇಂದ್ರ ಸರಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಮೂಲಕ ನೊಂದಾಯಿಸಿಕೊಂಡು ಎಫ್.ಎ ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿ ಕೇಂದ್ರವು ಪುತ್ತೂರು ಎಪಿಎಂಸಿಯ ಪ್ರಾಂಗಣದಲ್ಲಿ ಪ್ರಾರಂಭಗೊಂಡಿದೆ.
ಕರ್ನಾಟಕ ಸರಕಾರದ ಮರಾಟ ಮಹಾ ಮಂಡಳಿಯಿಂದ ಎಫ್.ಎ. ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು 2023ನೇ ಸಾಲಿನಲ್ಲಿ ಕೇಂದ್ರ ಸರಕಾರಿ ಘೋಷಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ.11,750ರಂತೆ ಖರೀದಿಸಲು ಕೇಂದ್ರಗಳನ್ನು ಪ್ರತಿ ತಾಲೂಕುಗಳಲ್ಲಿ ತೆರೆಯಲಾಗಿದೆ. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯ ಎಪಿಎಂಸಿ ಪ್ರಾಂಗಣದಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಬೆಂಬಲ ಬೆಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಗೆ ರೈತರು 2022-23ನೇ ಸಾಲಿನ ಪಹಣಿ ಪತ್ರ(ಆರ್‌ಟಿಸಿ), ಫ್ರುಟ್ಸ್((FRUITS) ತಂತ್ರಾಂಶದಲ್ಲಿ ರೈತರ ಹೆಸರನ್ನು ನೋಂದಾಯಿಸಿರಬೇಕು. ಫ್ರುಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಫ್ರುಟ್ಸ್‌ನ ಯಾವುದಾದರೂ ಮಾಹಿತಿ, ಆಧಾರ್ ಕಾರ್ಡ್ ತರಬೇಕು. ಆಧಾರ್ ನಂಬರ್ ಜೋಡಣೆಯಾದ ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ, ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರು 2023ರ ಮಾರ್ಚ್ 12 ಒಳಗಾಗಿ ನೊಂದಾವಣೆ ಮಾಡಿ ನೋಂದಣಿ ಚೀಟಿ ಹೊಂದಿರಬೇಕು.
ಪ್ರತಿ ಎಕರೆಗೆ 6 ಕ್ವಿಂಟಾಲ್, ಗರಿಷ್ಠ ಪ್ರಮಾಣ ಹಾಗೂ ನಿಗದಿತ ಅವಧಿಯೊಳಗೆ ನೊಂದಾವಣೆಗೊಂಡ ಪ್ರತಿ ರೈತರಿಂದ ಗರೀಷ್ಠ 20 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು. 2023ರ ಜುಲೈ 27ರ ತನಕ ರೈತರಿಂದ ಉಂಡೆ ಕೊಬ್ಬರಿಯನ್ನು ಖರೀದಿಸಲಾಗುವುದು. ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುತ್ತಿದ್ದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯ ತನಕ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449864424 ನಂಬರನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳಿಯ ನೋಡೆಲ್ ಸಂಪತ್ ತಿಳಿಸಿದ್ದಾರೆ.