ಆಲಂಕಾರು: ಕುಂತೂರು ಗ್ರಾಮದ ಕುಂತೂರು ಪದವು ರಾಮಡ್ಕ- ಕಂಡತ್ತಡ್ಕ ಕ್ಷೇತ್ರದಲ್ಲಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನದಲ್ಲಿ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ಮತ್ತು ನೇಮೊತ್ಸವ ಫೆ.23 ರಿಂದ ಫೆ.25 ಶನಿವಾರ ತನಕ ನಡೆಯಲಿದೆ.
ನಾಳೆ ಫೆ.23 ರಂದು ಬೆಳಿಗ್ಗೆ ಹೊರೆ ಕಾಣಿಕೆ ಸಮರ್ಪಣೆ,ಮದ್ಯಾಹ್ನ ಅನ್ನಸಂತರ್ಪಣೆ ಸಂಜೆ ತಂತ್ರಿಗಳ ಅಗಮನ ,ಸ್ವಸ್ತಿ ಪುಣ್ಯಹ ವಾಚನ ,ಸ್ಥಳ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ,ವಾಸ್ತುಪುಣ್ಯಾಹಾಂಸ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಫೆ.24 ಶುಕ್ರವಾರ ಬೆಳಿಗ್ಗೆ ಪುಣ್ಯಾಹವಾಚನ,ಕಲಶಪೂಜೆ,ಗಣಪತಿ ಹವನ,ನವಗ್ರಹ ಪೂಜೆ, ನವಗ್ರಹಧಾನ್ಯವಾಸ ,ಪ್ರಾರ್ಥನೆ ಪೂರ್ವಹ್ನ 11.24 ರ ವೃಷಭ ಲಗ್ನದ ಶ್ರೀ ಶಿರಾಡಿ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ,ತಂಬಿಲ ಸೇವೆ ಮಹಾಪೂಜೆ,ನೇಮ ನಿಯಮಾವಳಿಗಳ ನಿರ್ಣಯ,ಪ್ರಸಾದ ವಿತರಣೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆದು ಸಾಯಂಕಾಲ ಗೊನೆಮೂಹರ್ತ ನಡೆದು ಸಂಜೆ ಶ್ರೀ ಶಿರಾಡಿ ದೈವ ಹಾಗು ಪರಿವಾರ ದೈವಗಳ ತೆಗೆದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ಯಾಗಿ ಕಲ್ಕುಡ,ಕುಪ್ಪೆ ಪಂಜುರ್ಲಿ,ಕಲುರ್ಟಿ,ಬಚ್ಚನಾಯಕ,ಬಿರ್ಮೆರ್,ಗಿಣಿರಾಮ,ಪುರುಷ ದೈವ ಹಾಗು ಪರಿವಾರ ದೈವಗಳಿಗೆ ನೇಮೊತ್ಸವ ನಡೆಯಲಿದೆ.
ಫೆ.25 ರಂದು ಬೆಳಿಗ್ಗೆ ಶಿರಾಡಿ ದೈವ,ಗುಳಿಗ ದೈವಗಳ ನೇಮ ಬಳಿಕ ಕೈಕಾಣಿಕೆ,ಹರಕೆ ಸಂದಾಯ,ಗಡಿಗೆ ಪ್ರಯಾಣ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ಯಾಗಿ ದೈವಸ್ಥಾನ ಸಹಾಯರ್ಥ ಪ್ರಾಯೋಜಿಸಿದ ಅದೃಷ್ಟಚೀಟಿಯ ಪಲಿತಾಂಶ ಘೋಷಣೆಯಾಗಲಿದೆ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಅಗಮಿಸಿ ಶ್ರೀ ಮುಡಿ ಗಂಧ ಪ್ರಸಾದ ಸ್ವಿಕರೀಸಬೇಕಾಗಿ ಅಡಳಿತ ಸಮಿತಿಯ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಕುಂಡಡ್ಕ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಕುಂಡಡ್ಕ, ಗೌರವ ಅಧ್ಯಕ್ಷರಾದ ಡಾ!.ಕುಮಾರ ಸುಬ್ರಹ್ಮಣ್ಯ ಭಟ್ ಗ್ರಾಮ ದೈವ ಶ್ರೀ ಶಿರಾಡಿ ಮತ್ತು ಪರಿವಾರ ದೈವ ದೇವರುಗಳ ಟ್ರಸ್ಟ್ ಅದ್ಯಕ್ಷರು,ಪದಾದಿಕಾರಿಗಳು, ಸದಸ್ಯರು,ಜೀರ್ಣೋದ್ದಾರ ಸಮಿತಿಯ ಸದಸ್ಯರು ಬೈಲುವಾರು ಸಂಚಾಲಕರು ಹಾಗು ಕೂಡುಕಟ್ಟಿನ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.