ಬೆಂಗಳೂರಿನ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ ಸಹಕಾರ ನಿರ್ವಹಣೆ ಪರೀಕ್ಷೆಯಲ್ಲಿ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರಿಗೆ ಪ್ರಥಮ ಸ್ಥಾನ

0

ಪುತ್ತೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇವರ ಸಮನ್ವಯದಲ್ಲಿ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ(RICM) ಬೆಂಗಳೂರು ಇವರಿಂದ ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮದ (HDCM) 43 ಮತ್ತು 44 ನೇ ಅಧಿವೇಶನದ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಗ್ಲೋರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿ ಒಲಿವಿಯ ಪ್ರಶಾಂತಿ ರೆಬೆಲ್ಲೋರವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

HDCMನ 13 ಸಬ್ಜೆಕ್ಟ್ (2 ಸೆಮ್)ನಲ್ಲಿನ ಪ್ರಾಜೆಕ್ಟ್ ವರ್ಕ್, ಎಸಾಯಿನ್ಮೆಂಟ್ಸ್, ವೈವಾ ಈ ಎಲ್ಲಾ ವಿಷಯದಲ್ಲಿ ಒಲಿವಿಯಾ ಪ್ರಶಾಂತಿರವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಉನ್ನತ ಡಿಪ್ಲೋಮದ 43 ಮತ್ತು 44ನೇ ಅಧಿವೇಶನದ ಪರೀಕ್ಷೆಯಲ್ಲಿ 116 ಶಿಕ್ಷಣಾರ್ಥಿಗಳಿದ್ದು, 19 ಶಿಕ್ಷಣಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 56 ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 21 ಶಿಕ್ಷಣಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಪ್ರಥಮ ಸ್ಥಾನವನ್ನು ಪಡೆದ ಒಲಿವಿಯಾ ಪ್ರಶಾಂತಿ ರೆಬೆಲ್ಲೋ(ಮರೀಲು ದಿ.ಜೋನ್ ರೆಬೆಲ್ಲೋ ಹಾಗೂ ಲೆತ್ತೀಶಿಯಾ ಡಿ’ಸೋಜರವರ ಪುತ್ರಿ) ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ, ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್(ಮೂರು ವರ್ಷ) ಅನ್ನು ಮಂಗಳೂರಿನ ಬೊಂದೇಲ್ ನಲ್ಲಿ, ಬಿ.ಕಾಂ ಶಿಕ್ಷಣವನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ದರ್ಬೆ ಲಕ್ಷ್ಮೀ ಟೈಪಿಂಗ್ ಇನ್ಸಿಟಿಟ್ಯೂಟ್ ನಲ್ಲಿ ಟೈಪಿಂಗ್, ಮಂಗಳೂರಿನ ಕಾವೂರಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಶಾರ್ಟ್ ಹ್ಯಾಂಡ್, ಬೆಂಗಳೂರಿನಲ್ಲಿ ಹೈಯರ್ ಡಿಪ್ಲೊಮ ಇನ್ ಕೊ-ಅಪರೇಟಿವ್ ಮ್ಯಾನೇಜ್ ಮೆಂಟ್ ಶಿಕ್ಷಣವನ್ನು ಪೂರೈಸಿದ್ದರು.

ಬಳಿಕ ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಒಂದು ವರ್ಷ ಶಿಕ್ಷಕಿಯಾಗಿ, ಕೂರ್ನಡ್ಕ ಕರ್ನಾಟಕ ಕ್ಯಾಶೂ ಇಂಡಸ್ಟ್ರೀಸ್ ನಲ್ಲಿ 14 ವರ್ಷ ಸೆಕ್ರೆಟರಿಯಾಗಿ, ಟೈಪಿಂಗ್, ಎಕೌಂಟೆಂಟ್ ಮತ್ತು ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಣೆ, ಎನ್.ಆರ್.ಸಿ.ಸಿ(ಡಿ.ಸಿ ಆರ್) ಮೊಟ್ಟೆತ್ತಡ್ಕ ಇಲ್ಲಿ ಎರಡು ವರ್ಷ ಅಸಿಸ್ಟೆಂಟ್ ಇನ್ ಆಡಿಟ್ ಸೆಕ್ಷನ್ನಿನಲ್ಲಿ ನಿರ್ವಹಣೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕೊ- ಅಪರೇಟಿವ್ ಸೊಸೈಟಿಯಲ್ಲಿ ಕ್ಲಾರ್ಕ್ ಆಗಿ, ಪ್ರಸ್ತುತ ಗ್ಲೋರಿಯಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಎಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಪತಿ ಉಪ್ಪಿನಂಗಡಿ ಕಥೋಲಿಕ್ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿರುವ ಲ್ಯಾನ್ಸಿ ಡಿ’ಸೋಜ ಹಾಗೂ ಈರ್ವರು ಪುತ್ರಿಯರಾದ ಪಾಂಗ್ಲಾಯಿ ಬೆಥನಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಲೀಶಲ್ ಡಿ’ಸೋಜ, ಬೆಥನಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿರುವ ಲೆನಿಶಲ್ ಡಿ’ಸೋಜರವರೊಂದಿಗೆ ತೆಂಕಿಲ ನೂಜಿ ಎಂಬಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here