ಪಾಂಗ್ಲಾಯಿಯಲ್ಲಿ ಬೆಥನಿ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ಸ್ ವಿಶ್ವ ಚಿಂತರಾ ದಿನಾಚರಣೆ

0

ಪುತ್ತೂರು: ದರ್ಬೆ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಫೆ.22 ರಂದು ಸ್ಕೌಟ್ ಗೈಡ್ಸ್ ಸಂಸ್ಥಾಪಕರಾದ ಲಾರ್ಡ್ ಬೇಡೆನ್ ಪೊವೆಲ್‌ರವರ ಜನ್ಮದಿನವಾದ ವಿಶ್ವ ಚಿಂತರಾ ದಿನವನ್ನು ಆಚರಿಸಲಾಯಿತು.


ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸ್ಕೌಟ್ ಗೈಡ್ಸ್ ಪ್ರತಿಜ್ಞಾ ವಿಧಿ ಸ್ವೀಕರಿಸಿರುವುದರೊಂದಿಗೆ ನಿಯಮಾವಳಿಗಳನ್ನು ತಿಳಿಸಲಾಯಿತು. Lord Bedan Povelರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಾದ ಸಾತ್ವಿಕ ಗೌಡ ಹಾಗೂ ಎರೋಲ್ ಡಿಸೋಜರವರು ತಿಳಿಸಿದರು.

ಮೂಡಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮದ ಇಣುಕು ನೋಟವನ್ನುPower Point ಮೂಲಕ ತೋರಿಸಲಾಯಿತು. ಮುಖ್ಯಶಿಕ್ಷಕಿ ಭಗಿನಿ ಶಾಂತಿರವರು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭ ಹಾರೈಸಿದರು ಹಾಗೂ ಪ್ರತೀಕ್ಷಾ ಶೆಣೈ State Swimming Associationನಿಂದ ಪುರಸ್ಕಾರಕ್ಕೆ ಒಳಗಾದ ರಾಷ್ಟ್ರಮಟ್ಟದ ಈಜುಪಟು ಹಾಗೂ ಕಿಯಾಕಿಂಗ್ ಬೀಚ್ swim ಗಳಲ್ಲಿ ಭಾಗವಹಿಸಿದ ಪ್ರಯುಕ್ತ ಗೌರವಿಸಲಾಯಿತು. ವಿದ್ಯಾರ್ಥಿನ ನಿಧಿ ಸ್ವಾಗತಿಸಿದರು. ಪ್ರತೀಕ್ಷಾ ಶೆಣೈರವರು ಕಾರ್ಯಕ್ರಮ ನಿರೂಪಿಸಿದರು. ಗೈಡ್ಸ್ ಶಿಕ್ಷಕಿ ಮೈತ್ರೇಯಿಯವರು ಕಾರ್ಯಕ್ರಮ ಸಂಯೋಜಿಸಿದರು

LEAVE A REPLY

Please enter your comment!
Please enter your name here