ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆಯಾಗಲು ಶ್ರಮಿಸಿದವರಿಗೆ ದ.ಕ. ಎಸ್.ಪಿ. ವಿಕ್ರಮ್ ಅಮಟೆ ಅವರು ಗೌರವಾರ್ಪಣೆ ಸಲ್ಲಿಸಿದ್ದಾರೆ.


ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ‌ 28/2019ರ ಕಲಂ 448, 376, ಐಪಿಸಿ ಮತ್ತು ಕಲಂ‌ 4 ಪೋಕ್ಸೋ ಕಾಯ್ದೆ 2012ರ ಕಲಂ:3(1)W(1), 3(2)(Va) SC/ST Act ಇದರಲ್ಲಿ ಆರೋಪಿಯಾಗಿದ್ದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ‌ ಪುಲ್ಲೇರಿ ನಿವಾಸಿ ಸತೀಶ್ ಪೂಜಾರಿ (35 ವರ್ಷ) ಎಂಬಾತನಿಗೆ ಮಂಗಳೂರಿನ‌ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ–1, (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರು ಫೆ. 23ರಂದು 10 ವರ್ಷ ಜೈಲುವಾಸ ಹಾಗೂ 10,000 ರೂಪಾಯಿ ದಂಡ, ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ಮತ್ತು 6 ತಿಂಗಳ ಜೈಲುವಾಸ ಹಾಗೂ 1000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದರು.

ಈ ಪ್ರಕರಣದಲ್ಲಿ ಆರೋಪಿತನಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಲು ಶ್ರಮಿಸಿರುವ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾ ದೇವಿ, RFSLನ ವೈಜ್ಞಾನಿಕ ಅಧಿಕಾರಿ ಭುವನೇಶ್ವರಿ MS, ತನಿಖೆ ಸಹಾಯಕರಾಗಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸೀತಾರಾಮ್, Court Monitoring Cellನಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಹಿಳಾ ಕಾನ್ಸ್ಟೇಬಲ್ ಕು.‌ಸಫಿನಾ ಅವರುಗಳ ಕರ್ತವ್ಯ ಬದ್ಧತೆ, ಪರಿಶ್ರಮ ಹಾಗೂ ಕರ್ತವ್ಯ ನಿಷ್ಠೆ ಯನ್ನು ಪ್ರೋತ್ಸಾಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಪೊಲೀಸ್ ಅಧೀಕ್ಷಕ ವಿಕ್ರಮ್ ಅಮಟೆರವರು ಸತ್ಕರಿಸಿ ಅಭಿನಂದನೆ‌ ಸಲ್ಲಿಸಿದರು.

ಈ ಹಿಂದೆ ಪುತ್ತೂರಿನಲ್ಲಿ ಡಿವೈಎಸ್ಪಿಯಾಗಿದ್ದು ಪ್ರಸ್ತುತ ಡಿ.ಸಿ.ಆರ್.ಬಿ. ವಿಭಾಗದ ಡಿವೈಎಸ್ಪಿಯಾಗಿರುವ ಡಾ.‌ಗಾನಾ ಪಿ. ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.‌ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಅವರು ಪುತ್ತೂರು ನ್ಯಾಯಾಲಯದ ಎಪಿಪಿ ಚೇತನಾದೇವಿಯವರ ಸಹೋದರಿಯಾಗಿದ್ದು ಹೆಡ್ ಕಾನ್ಸ್ಟೇಬಲ್ ಸೀತಾರಾಮ ಅವರು ಅನಂತಾಡಿ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here