ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ರಾಮಡ್ಕ-ಕಂಡತ್ತಡ್ಕ ಕ್ಷೇತ್ರ ಕುಂತೂರು ಪದವಿನಲ್ಲಿ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ,ಧಾರ್ಮಿಕ ಸಭೆ , ನೇಮೋತ್ಸವ

0

ಆಲಂಕಾರು:ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ರಾಮಡ್ಕ-ಕಂಡತ್ತಡ್ಕ ಕ್ಷೇತ್ರ ಕುಂತೂರು ಪದವಿನಲ್ಲಿ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಫೆ.23 ರಿಂದ ಫೆ.25 ರ ತನಕ ನಡೆಯಿತು.


ಫೆ.23 ರಂದು ಹೊರೆಕಾಣಿಕೆ, ದೇವತಾ ಕಾರ್ಯಕ್ರಮ ನಡೆದು ಫೆ.೨೪ ರಂದು ಬೆಳಿಗ್ಗೆ ಪುಣ್ಯಾಹವಾಚನ, ಕಲಶ ಪೂಜೆ, ಗಣಪತಿ ಹವನ, ನವಗ್ರಹ ಪೂಜೆ, ನವಗ್ರಹ ಧಾನ್ಯವಾಸ ಪ್ರಾರ್ಥನೆ ನಡೆದು ಶ್ರೀ ಶಿರಾಡಿ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮ-ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ನೇಮ ನಿಯಮಾವಳಿಗಳ ನಿರ್ಣಯ, ಮತ್ತು ಪ್ರಸಾದ ವಿತರಣೆ, ನಡೆದು ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಶ್ರೀ ಶಿರಾಡಿ ದೈವ ಹಾಗೂ ಶ್ರೀ ಪರಿವಾರ ದೈವಗಳ ಭಂಡಾರ ತೆಗೆದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.


ಬಂದರು ಮತ್ತು ಮೀನುಗಾರಿಕೆ ಸಚಿವರಾದ ಅಂಗಾರ ಎಸ್ ಪಾಲ್ಗೊಂಡು ಮಾತನಾಡಿ ನಮ್ಮಧರ್ಮ ಉಳಿಯಬೇಕಾದರೇ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಕಾರ್ಯಗಳನ್ನುನಿರ್ವಹಿಸಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ.ದೈವದ ಹುಟ್ಟು ಆದರ ಪಾರ್ಧನದಲ್ಲಿರುತ್ತದೆ. ನಮ್ಮಲ್ಲಿ ಕರ್ಮನಿಷ್ಠೆಗಳು,ಭಕ್ತಿಭಾವಗಳು ಇದ್ದಾಗ ಮಾತ್ರ ನಮಗೆ ದೈವದ ಅನುಗ್ರಹ ಪ್ರಾಪ್ತಿಯಾಗುತ್ತದೆ. ಧರ್ಮಸ್ಥಳ ಉಜಿರೆಯ ಸಿವಿಲ್ ಇಂಜೀನಿಯರ್ ಹಾಗು ದೈವನರ್ತಕ ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಿ ದೈವರಾಧನೆ ಹಿಂದಿನ ಕಟ್ಟುಕಟ್ಟಲೆಯಂತೆ ಮುಂದುವರಿಯಬೇಕು. ದೈವದ ಪರಿಚಾರಕ ವರ್ಗದವರು ದೈವದ ಅಭಯವನ್ನು ಉಳಿಸುವ ಕೆಲಸ ಕಾರ್ಯವನ್ನು ಮಾಡಬೇಕು,ಕೊರೋನಾ ಮಹಾಮಾರಿ ಬಂದಿದ್ದರು ನಮಗೆ ಯಾವುದೇ ಅಪಾಯ ಬಂದಿಲ್ಲ ಇದಕ್ಕೆ ಮೂಲಕಾರಣ ನಾವು ನಂಬಿಕೊಂಡು ಬಂದಂತಾಹ ದೈವರಾಧನೆ.ದೈವರಾಧನೆ 16 ಕಟ್ಟುಕಟ್ಟಲೆಯಂತೆ ನಡೆಯಬೇಕು ಹಾಗು ಆದನ್ನು ಉಳಿಸುವ ಕೆಲಸಕಾರ್ಯವನ್ನು ಮಾಡಬೇಕು. ದೈವದ ನರ್ತನಮಾಡುವವರು ಹಾಗು ಪರಿಚಾರಕ ವರ್ಗದವರು ಮೂಲ ವ್ಯವಸ್ಥೆಯಲ್ಲಿ ಮುಂದುವರಿಯಬೇಕು, ಅದು ಕಾಂಟ್ರಕ್ಟ್ ವ್ಯವಸ್ಥೆಗೆ ಮಾರ್ಪಡುಗೊಳ್ಳಬಾರದು ಎಂದು ತಿಳಿಸಿದರು.


ವಲಯಾರಣ್ಯಧಿಕಾರಿ ಮಂಜುನಾಥ ಮಾತನಾಡಿ ನನ್ನ ಸ್ವಂತ ಊರು ಚಿಕ್ಕಮಂಗಳೂರು ನಾನು 20 ವರ್ಷಗಳಿಂದ ಈ ಭಾಗದಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದೆನೆ.ತುಳುನಾಡಿನ ಭೂತರಾಧನೆಯನ್ನು ಸಣ್ಣದಿಂದಲೇ ಅರಿತವ ಪ್ರಕೃತಿಯೇ ದೇವರು ಪ್ರಕೃತಿಯಲ್ಲಿರುವ ಮರ ಗಿಡಗಳಲ್ಲಿ ದೇವರಿರುತ್ತಾನೆ .ಅದ್ದರಿಂದ ಪ್ರಕೃತಿಯ ರಕ್ಷಣೆಗೆ ನಾವೆಲ್ಲ ಬದ್ದರಾಗಬೇಕೆಂದು ತಿಳಿಸಿ ದೈವ ನರ್ತನೋತ್ಸವ ಈ ಪ್ರದೇಶ ಅರಣ್ಯ ಪ್ರದೇಶ ವಾಗಿದ್ದು 1905 ರಲ್ಲಿಯೇ ಇಲ್ಲಿ ದೈವರಾಧನೆಯ ನಡೆಯುತ್ತಿತ್ತು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಅರಣ್ಯ ಇಲಾಖೆಯವರು ಕಲ್ಪಿಸಿಕೊಡಬೇಕೆಂದು ಮೂಲ ದಾಖಲೆಯಲ್ಲಿರುವ ಕಾರಣ ಇಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿ ಅರಣ್ಯ ರಕ್ಷಣೆಯಲ್ಲಿ ತಾವೆಲ್ಲರೂ ಸಹಕರಿಸುವಂತೆ ವಿನಂತಿಸಿದರು.


ಪೆರಾಬೆ ಗ್ರಾ.ಪಂ ಅಧ್ಯಕ್ಷ ಮೋಹನದಾಸ್ ರೈ ಪರಾರಿಗುತ್ತು,ಶ್ರೀ ಕ್ಷೇತ್ರಶರವೂರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ., ಬುಡೇರಿಯಾ ಉಳ್ಳಾಲ್ತಿ,ಉಳ್ಳಾಕ್ಲು ದೈವಸ್ಥಾನದ ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ ಸಂಧರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.


ವೇದಿಕೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಡಾ! ಕುಮಾರ ಸುಬ್ರಹ್ಮಣ್ಯ ಭಟ್,ಅರ್ಬಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣಕುಮಾರ್ ಅತ್ರಿಜಾಲು,ನೆರೊಳ್ಪಲಿಕೆ ಶ್ರೀ ಶಿರಾಡಿ ದೈವಸ್ಥಾನದ ಅಧ್ಯಕ್ಷರಾದ ಶಿವಪ್ಪ ಗೌಡ ಶೇಡಿ, ಶ್ರೀ ಜೈನದೈವ ಉಳ್ಳಾಕ್ಲು ಕ್ಷೇತ್ರ, ಕೆಮ್ಮತ ಕೂಟೇಲು-ಮಣಿಕ್ಕಳ ಇದರ ಅಧ್ಯಕ್ಷರಾದ ಸುಬ್ರಾಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ಶಿರಾಡಿ ದೈವಸ್ಥಾನ ಕಂಡತ್ತಡ್ಕ- ರಾಮಡ್ಕದ ಅಡಳಿತ ಸಮಿತಿಯ ಅಧ್ಯಕ್ಷರು ಸಭೆಯ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಕುಂಡಡ್ಕ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಕೆ.ಎಸ್ ಬಾಬು,ಮೀನಾಕ್ಷಿ, ನೀಲಯ್ಯ ಗೌಡ ಕಂಡತ್ತಡ್ಕ,ಪದ್ಮನಾಭ ಗೌಡ ಕಂಡತ್ತಡ್ಕ,ಪದ್ಮಯ್ಯ ಗೌಡ,ಕುಶಾಲಪ್ಪ ಗೌಡ ಅನ್ನಡ್ಕ,ಕುಶಾಲಪ್ಪ ಗೌಡ ಮಣಿಕ್ಕಳ,ಉಮೇಶ್ ಮಣಿಕಳ,ಸೋಮಪ್ಪ ಗೌಡ ಎರ್ಮಳಾ,ಶಶಿಧರ ಗೌಡ,ಪೂರ್ಣಿಮಾ ಕೆಮ್ಮಣ್ಣು,ಸುರೇಶ ಕುಂಡಡ್ಕ ಅತಿಥಿಗಳನ್ನು ಸ್ವಾಗತಿಸಿ ಸುಬ್ರಹ್ಮಣ್ಯ ಗೌಡ,ನಾಗಪ್ಪ ಗೌಡ ಏನಾಜೆ ಕಾರ್ಯಕ್ರಮ ನಿರೂಪಿಸಿ ಅಡಳಿತ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಅಡೀಲು ಧನ್ಯವಾದ ಸಮರ್ಪಿಸಿದರು.

ಮದ್ಯಾಹ್ನ ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ದೈವಸ್ಥಾನಕ್ಕೆ ಮರಮುಟ್ಟು ಮತ್ತು ಸ್ಥಳದಾನ ಮಾಡಿದ ಮಹನೀಯರಾದ ರಾಧಾಕೃಷ್ಣ ಪಂಜ,ಮೇದಪ್ಪ ಗೌಡ ಡೆಪ್ಪುಣಿ ಮರ್ದಾಳ,ಶಾಂತಪ್ಪ ಗೌಡ ಮಣಿಕಳ,ತಿಮ್ಮಪ್ಪ ಗೌಡ ಕುಂಡಡ್ಕ,ಡಾ! ಕುಮಾರ ಸುಬ್ರಹ್ಮಣ್ಯ ಭಟ್ ರವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.ರಾತ್ರಿ ಧಾರ್ಮಿಕ ಸಭೆ ನಡೆದ ಬಳಿಕ ಅನ್ನಸಂತರ್ಪಣೆ ಯಾಗಿ ಕಲ್ಕುಡ,ಕಲುರ್ಟಿ,ಕುಪ್ಪೆ ಪಂಜುರ್ಲಿ,ಬಚ್ಚನಾಯಕ,ಬಿರ್ಮೆರ್,ಗಿಣಿರಾಮ,ಪುರುಷ ದೈವ,ಹಾಗು ಪರಿವಾರ ದೈವಗಳಿಗೆ ನೇಮೊತ್ಸವ ನಡೆದು ಫೆ. 25 ರಂದು ಬೆಳಿಗ್ಗೆ ಶಿರಾಡಿ ದೈವ,ಗುಳಿಗ ದೈವದ ನೇಮೊತ್ಸವ ಬಳಿಕ ಕೈಕಾಣಿಕೆ,ಹರಕೆ ಸಂದಾಯ,ಗಡಿಗೆ ಪ್ರಯಾಣ ನಡೆಯಿತು.ಆನಂತರ ಅನಂತರ ದೈವಸ್ಥಾನದ ಸಹಾಯರ್ಥ ಪ್ರಾಯೋಜಿಸಿದ ಅದೃಷ್ಟ ಚೀಟಿಯ ಪಲಿತಾಂಶ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಗೌಡ ಎರ್ಮಾಳ,ಕೋಶಾಧಿಕಾರಿ ಸುಂದರ ಗೌಡ ಕುಂಡಡ್ಕ, ಜೋರ್ಣೋದ್ದಾರ ಸಮಿತಿಯ ಅಧ್ಯಕ್ಷ ಉಮೇಶ ಕುಂಡಡ್ಕ,ಗೌರವ ಸಲಹೆಗಾರರಾದ ಆಶಾತಿಮ್ಮಪ್ಪ ಗೌಡ ,ಉಪಾದ್ಯಕ್ಷರಾದ ಸುಬ್ರಹ್ಮಣ್ಯ ಗೌಡ ಕೆ.ಜಿ,ನೀಲಯ್ಯ ಗೌಡ ಕಂಡತ್ತಡ್ಕ,ಜನ್ನಪ್ಪ ಗೌಡ ಏನಾಜೆ,ಹೊನ್ನಪ್ಪ ಗೌಡ ಮೇರುಗುಡ್ಡೆ,ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಕಳ,ಕೋಶಾಧಿಕಾರಿ ಸುರೇಶ್ ಕುಂಡಡ್ಕ,ಜತೆ ಕಾರ್ಯದರ್ಶಿ ಸುಜಿತ್ ಕುಂಡಡ್ಕ ಸೇರಿದಂತೆ ವಿವಿಧ ಸಮಿತಿಯ ಸಂಚಾಲಕರು ,ಸಮಿತಿಯ ಸದಸ್ಯರು,ಗ್ರಾಮ ದೈವ ಶ್ರೀ ಶಿರಾಡಿ ಮತ್ತು ಪರಿವಾರ ದೈವ ದೇವರುಗಳ ಸೇವಾ ಟ್ರಸ್ಟ್ ಸದಸ್ಯರು,ಜೀರ್ಣೋದ್ದಾರ ಸಮಿತಿ ಸದಸ್ಯರು,ಬೈಲುವಾರು ಸಂಚಾಲಕರು ಹಾಗು ಕೂಡುಕಟ್ಟಿನ ಹತ್ತುಸಮಸ್ತರು ಕಂಡತ್ತಡ್ಕ – ರಾಮಡ್ಕದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here