ನೂಜಿಬಾಳ್ತಿಲ: ಕಾಡಾನೆ ಪ್ರತ್ಯಕ್ಷ – ಪತ್ತೆ ಕಾರ್ಯ ಚುರುಕು

0

ಕಡಬ: ಕಡಬ ತಾಲೂಕಿನ ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯ ಪ್ರದೇಶದಲ್ಲಿ ಒಂಟಿ ಕಾಡಾನೆ ವ್ಯಕ್ತಿಯೋರ್ವರಿಗೆ ರವಿವಾರ ಬೆಳಗ್ಗೆ ಕಾಣಸಿಕ್ಕ ಘಟನೆ ನಡೆದಿದೆ.

ಕಾಡಾನೆ ಕಾಣ ಸಿಕ್ಕ ಮಾಹಿತಿಯನ್ನು ವ್ಯಕ್ತಿ ಅರಣ್ಯ ಇಲಾಖೆಗೆ ತಿಳಿಸಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಕಾಡಾನೆ ಪತ್ತೆ ಕಾರ್ಯ ತಂಡ ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಕುಗೊಳಿಸಿ ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದರು.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಸೋಮವಾರ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸ್ಥಳೀಯರ ಆಗ್ರಹದಂತೆ ಐದು ಸಾಕಾನೆಗಳ ನೆರವಿನಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದ್ದು ಮೂರನೇ ದಿನದ ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆಯನ್ನು ಕೊಂಬಾರು ಬಳಿ ಸೆರೆಹಿಡಿದು ನಾಗರಹೊಳೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿದೆ.

LEAVE A REPLY

Please enter your comment!
Please enter your name here