ರಂಜಿಸಿದ ಮಹಿಳೆಯರ ಸಮರ ಸೌಗಂಧಿಕಾ ತಾಳಮದ್ದಳೆ

0

ಪುತ್ತೂರು: ಶ್ರೀ ಕ್ಷೇತ್ರ ಪಡುಮಲೆ, ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ ಇವರಿಂದ ಸಮರ ಸೌಗಂಧಿಕಾ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ್ ಭಟ್ ಪುತ್ತೂರು, ಚೆಂಡೆ- ಮದ್ದಳೆಗಳಲ್ಲಿ ಶಂಕರನಾರಾಯಣ ಭಟ್ ಪದ್ಯಾಣ, ರಾಮಪ್ರಸಾದ್ ವದ್ವ ಮತ್ತು ಮುಮ್ಮೇಳದಲ್ಲಿ ಭೀಮನಾಗಿ ಪದ್ಮಾ ಕೆ ಆರ್ ಆಚಾರ್ಯ, ದ್ರೌಪದಿಯಾಗಿ ಜಯಲಕ್ಷ್ಮಿ ವಿ ಭಟ್, ಹನುಮಂತನಾಗಿ ಪ್ರೇಮಾ ಕಿಶೋರ್, ಕುಬೇರನಾಗಿ ಶ್ರೀವಿದ್ಯಾ ಜೆ ರಾವ್ ಭಾಗವಹಿಸಿದ್ದರು.

ಕಾರ್ಯಕ್ರಮವು ಶ್ರೀಮತಿ ಮತ್ತು ಶ್ರೀ ಸುಧಾಕರ ರೈ ಕಟ್ಟಾವು ಪ್ರಾಯೋಜಕತ್ವದಲ್ಲಿ ನಡೆಯಿತು. ದೇವಳದ ವತಿಯಿಂದ ಕಲಾವಿದರಿಗೆ ಪ್ರಸಾದವಿತ್ತು ಗೌರವಿಸಲಾಯಿತು.

LEAVE A REPLY

Please enter your comment!
Please enter your name here