ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸ್ಕೌಟ್ ಗೈಡ್ ಚಳವಳಿಯ ಸಂಸ್ಥಾಪಕರ ದಿನಾಚರಣೆ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಶಾಲಾ ಸ್ಕೌಟ್ ಗೈಡ್ ಬುಲ್ ಬುಲ್ ವತಿಯಿಂದ ಸ್ಕೌಟ್ ಗೈಡ್ ಚಳವಳಿಯ ಸಂಸ್ಥಾಪಕ ಬ್ಯಾಡನ್ ಪೊವೆಲ್‌ರವರ ಜನ್ಮ ದಿನಾಚರಣೆ ಚಿಂತನಾ ದಿನಾಚರಣೆ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ರಾಥೋಡ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಸ್ತನ್ನು ರೂಡಿಸಿ ಮೌಲ್ಯಯುತ ಬದುಕನ್ನು ರೂಪಿಸಿಕೊಳ್ಳಿ ಸಾಮಾಜಿಕ ಜಾಲತಾಣವನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ ಎಂದರು.

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್, ಹಿರಿಯ ಗೈಡ್ ಶಿಕ್ಷಕಿ ವಿಲ್ಮಾ ಫರ್ನಾಂಡಿಸ್ ಹಾಗೂ ಸ್ಕೌಟ್ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ೨೮೦ ಸ್ಕೌಟ್, ಗೈಡ್, ಕಬ್, ಮತ್ತು ಬುಲ್‌ಬುಲ್ ಮಕ್ಕಳು ಭಾಗವಹಿಸಿದರು

LEAVE A REPLY

Please enter your comment!
Please enter your name here