ನೆಕ್ಕಿಲಾಡಿ ಗುರು ರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ; ಗೌರವಾಧ್ಯಕ್ಷರು: ಪೇಜಾವರ ಶ್ರೀ, ರಾಧಾಕೃಷ್ಣ ನಾಯ್ಕ್‌, ಅಧ್ಯಕ್ಷರು: ಹರೀಶ್ ಉಪಾಧ್ಯಾಯ, ಧನ್ಯಕುಮಾರ್ ರೈ, ಪ್ರಧಾನ ಕಾರ್ಯದರ್ಶಿ: ಯನ್. ಗೋಪಾಲ ಹೆಗ್ಡೆ, ಕೋಶಾಧಿಕಾರಿ: ಕೆ.ಉದಯ ಕುಮಾರ್

0

ಪುತ್ತೂರು: ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿಯ ಶ್ರೀಗುರು ರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರುಗಳಾಗಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಪಿಡಬ್ಲ್ಯೂಡಿ ಪ್ರಥಮ ದರ್ಜೆ ಗುತ್ತಿಗೆದಾರ ರಾಧಾಕೃಷ್ಣ ನಾಯ್ಕ್ ನೆಕ್ಕಿಲಾಡಿ, ಅಧ್ಯಕ್ಷರುಗಳಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಹರೀಶ್ ಉಪಾಧ್ಯಾಯ ಮತ್ತು ವಿಶ್ವಹಿಂದೂ ಪರಿಷದ್ ಮಾಜಿ ಜಿಲ್ಲಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತುರವರನ್ನು ಆಯ್ಕೆ ಮಾಡಲಾಗಿದೆ. ‌

ಬ್ರಹ್ಮಕಲಶೋತ್ಸವ ಸಮಿತಿಯ ಪೂರ್ವಸಿದ್ಧತಾ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು ಕೋಶಾಧಿಕಾರಿಯಾಗಿ ಉದ್ಯಮಿ ಕೆ.ಉದಯ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಉಪ್ಪಿನಂಗಡಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಗೋಪಾಲ ಹೆಗ್ಡೆ ನೆಕ್ಕಿಲಾಡಿ, ಉಪಾಧ್ಯಕ್ಷರಾಗಿ ನೆಕ್ಕಿಲಾಡಿ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಎನ್., ಕಾರ್ ಕ್ಲಬ್ ಮಾಲಕ ಸದಾನಂದ ಕೆ. ಮತ್ತು ಕಾರ್ಯದರ್ಶಿಗಳಾಗಿ ಪ್ರಶಾಂತ್ ಮತ್ತು ಶ್ರೀನಿಧಿ ಉಪಾಧ್ಯಾಯರವರನ್ನು ಆಯ್ಕೆ ಮಾಡಲಾಯಿತು.

ಅಲ್ಲದೆ, ವಿವಿಧ ಉಪ ಸಮಿತಿಗಳಿಗೆ ಪದಾಧಿಕಾರಿಗಳಿಗೆ ಪದಾಧಿಕಾರಿಗಳು ಮತ್ತು ಸದಸ್ಯರನ್ನು ನೇಮಕ ಮಾಡಲಾಯಿತು. ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಎಪ್ರಿಲ್ 30ರಿಂದ ಮೇ 4ರವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here