ಕಾಂಗ್ರೆಸ್ ಘೋಷಿಸಿರುವ ಭರವಸೆಗಳನ್ನು ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸಿ; ಸರ್ವೆ ವಲಯ ಕಾಂಗ್ರೆಸ್ ಸಮಾವೇಶದಲ್ಲಿ ಎಂ.ಬಿ ವಿಶ್ವನಾಥ ರೈ

0

-ಸರ್ವೆಗೆ ಅತೀ ಹೆಚ್ಚು ಅನುದಾನ ನೀಡಿದ್ದೇನೆ-ಶಕುಂತಳಾ ಶೆಟ್ಟಿ
-ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು-ಅಶೋಕ್ ರೈ
-ನೂತನ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ-ಸತೀಶ್ ಕೆಡೆಂಜಿ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನೀಡಿರುವ ಹೊಸ ಭರವಸೆಗಳನ್ನು ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸುವುದೇ ನಮ್ಮ ಕಾರ್ಯಕರ್ತರ ಕರ್ತವ್ಯ ಆಗಬೇಕು. ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿ ಮಹಿಳೆಗೆ ಮಾಸಿಕ 2000 ಸಹಾಯ ಧನ, ಪ್ರತಿ ಬಿ.ಪಿ.ಎಲ್ ಕಾರ್ಡುದಾರನ ಮನೆಯ ಪ್ರತಿ ಸದಸ್ಯನಿಗೆ 10 ಕೆ. ಜಿ. ಅಕ್ಕಿ ನೀಡಲಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ನೀಡಿದ ಭರವಸೆ ಈಡೇರಿಸುವುದು ಗ್ಯಾರಂಟಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹೇಳಿದರು. ಫೆ.26ರಂದು ಕಲ್ಪಣೆ ಸಮುದಾಯ ಭವನದಲ್ಲಿ ನಡೆದ ಸರ್ವೆ ವಲಯ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವೆಗೆ ಅತೀ ಹೆಚ್ಚು ಅನುದಾನ ನೀಡಿದ್ದೇನೆ-ಶಕುಂತಳಾ ಶೆಟ್ಟಿ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ನಾನು ಶಾಸಕಿಯಾಗಿದ್ದ ಸಮಯದಲ್ಲಿ ಸರ್ವೆ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ನಾವಿಂದು ಸಭೆ ನಡೆಸುತ್ತಿರುವ ಸಭಾಭವನ ನನ್ನ ಶಾಸಕತ್ವ ಅವಧಿಯಲ್ಲಿ ಅನುದಾನ ನೀಡಿ ನಿರ್ಮಿಸಿದ್ದಾಗಿದೆ ಎಂದ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು-ಅಶೋಕ್ ರೈ
ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಮಾತನಾಡಿ ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೆಚ್ಚು ಕಾರ್ಯಪ್ರವೃತ್ತರಾಗಬೇಕಾಗಿದ್ದು ಅದಕ್ಕೆ ನಾವು ಸಹಕಾರ ನೀಡುತ್ತೇವೆ. ಪಕ್ಷದ ಅಭ್ಯರ್ಥಿ ಗೆಲ್ಲಲು ಪ್ರತಿಯೋರ್ವರೂ ಪರಿಶ್ರಮ ಪಡಬೇಕು ಎಂದು ಅವರು ಹೇಳಿದರು.

ನೂತನ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ-ಸತೀಶ್ ಕೆಡೆಂಜಿ
ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ ಕಾಂಗ್ರೆಸ್ ಪಕ್ಷದ ನೂತನ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ, ಕಾಂಗ್ರೆಸ್ ಮುಖಂಡ ಚಂದ್ರಹಾಸ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಬನ್ನೂರು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಮಳ ರಾಮಚಂದ್ರ ಭಟ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ , ಪಂಚಾಯತ್ ರಾಜ್ ಅಧ್ಯ ಕ್ಷ ಸಂತೋಷ್ ಭಂಡಾರಿ, ಎನ್‌ಎಸ್‌ಯುಐ ಅಧ್ಯಕ್ಷ ಚಿರಾಗ್ ರೈ, ಅಸಂಘಟಿಕ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೊ, ಯಂಗ್ ಬ್ರೀಗ್ರೇಡ್ ಅಧ್ಯಕ್ಷ ರಂಜಿತ್ ಬಂಗೇರ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ರಿಯಾಝ್ ಪರ್ಲಡ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ನಗರ ಕಾಂಗ್ರೆಸ್ ಕಾರ್ಯದರ್ಶಿ ವಿಕ್ಟರ್ ಪಾಯಿಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಅಸ್ಮಾ ಘಟ್ಟಮನೆ, ಪಕ್ಷದ ಹಿರಿಯ ನಾಯಕರಾದ ಇಬ್ರಾಹಿಂ ಕಡ್ಯ, ಬೂತ್ ಅಧ್ಯಕ್ಷರಾದ ಯತೀಶ್ ರೈ ಮೇಗಿನಗುತ್ತು, ಅಶೋಕ್ ಎಸ್.ಡಿ, ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಸರ್ವೆದೋಳ, ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಕೆ ಮಹಮ್ಮದ್, ವಲಯ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಮರಿಯ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಉಪಾದ್ಯಕ್ಷೆ ಯೋಗಿನಿ ರೈ ಮೇಗಿನಗುತ್ತು, ಸೌಮ್ಯ ಆರ್ ಕಂಬಳಿ, ಸೀತಾ ಉದಯ ಶಂಕರ್ ಭಟ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾದ್ಯಕ್ಷ ಅಝೀಝ್ ರೆಂಜಲಾಡಿ, ಪ್ರ.ಕಾರ್ಯದರ್ಶಿ ಶರೀಫ್ ಕೊಯಿಲ, ಕಾರ್ಮಿಕ ಘಟಕದ ಉಪಾಧ್ಯಕ್ಷ ಹನೀಫ್ ಕಲ್ಪಣೆ, ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ನೌಫಲ್ ಅಜ್ಜಿಕಲ್ಲು, ಉಪಾಧ್ಯಕ್ಷ ಸಂಜೀವ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಸಾದಿಕ್ ಬಾಳಾಯ, ಕಿಸಾನ್ ಘಟಕದ ಉಪಾಧ್ಯಕ್ಷ ಶಶಿಧರ್ ಎಸ್.ಡಿ, ತಾ.ಪಂ ಮಾಜಿ ಸದಸ್ಯೆ ಸುಮತಿ ಸೊರಕೆ, ಬೂತ್ ಸಂಘಟನಾ ಕಾರ್ಯದರ್ಶಿ ಎ.ಆರ್. ನೌಫಲ್ ಕೂಡುರಸ್ತೆ, ಝೈನುದ್ದೀನ್ ಹಾಜಿ ರೆಂಜಲಾಡಿ, ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ಡಿ, ವಿಜಯಾ ಕರ್ಮಿನಡ್ಕ, ಕಮಲಾ ನೇರೋಳ್ತಡ್ಕ, ಮಾಜಿ ಸದಸ್ಯರಾದ ಶರೀಫ್ ಸರ್ವೆ, ಬೊಗ್ಗ ಮುಗೇರ, ಸೀತಾ ಸರ್ವೆ, ಮುಂಡೂರು ಸಿ.ಎ. ಬ್ಯಾಂಕ್ ನಿರ್ದೇಶಕರಾದ ಆನಂದ ಪೂಜಾರಿ ಸರ್ವೆದೋಳ, ಕೊರಗಪ್ಪ ಸೊರಕೆ, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಹಿಂದುಳಿದ ವರ್ಗ ಘಟಕದ ಕಾರ್ಯದರ್ಶಿ ಕಿರಣ್ ಎಸ್.ಡಿ, ಕಾಂಗ್ರೆಸ್ ಪ್ರಮುಖರಾದ ಲತೀಫ್ ಬಡಕೋಡಿ, ಜಬ್ಬಾರ್ ಬಡಕೋಡಿ, ಅಬ್ದುಲ್ ರಹೀಂ ರೆಂಜಲಾಡಿ, ಹಮೀದ್ ಕೂಡುರಸ್ತೆ, ಸುರೇಶ್‌ಎಸ್.ಡಿ, ಸುರೇಶ್ ಗೌಡ ಸೊರಕೆ, ಫಾರೂಕ್ ರೆಂಜಲಾಡಿ, ಶಾನವಾಝ್ ಬಪ್ಪಳಿಗೆ, ಗಂಗಾಧರ್ ಶೆಟ್ಟಿ, ಹುಸೈನ್ ರೆಂಜಲಾಡಿ, ಆಸಿಫ್ ರೆಂಜಲಾಡಿ, ಶಾಂತಪ್ಪ ಕಲ್ಕಾರ್, ಮಹಮ್ಮದ್ ಕೆ.ಜಿ.ಎನ್, ಬಶೀರ್ ಪರಾಡ್, ಜಾಬಿರ್ ಸುಲ್ತಾನ್ ಕೂಡುರಸ್ತೆ, ನಿಝಾಮ್ ಕೂಡುರಸ್ತೆ, ಆರಿಫ್ ಕೂಡುರಸ್ತೆ, ಸಲಾಂ ಸಂಪ್ಯ, ರಫೀಕ್ ಮೊಟ್ಟೆತ್ತಡ್ಕ, ಇಸ್ಮಾಯಿಲ್ ಕಟ್ಟತ್ತಡ್ಕ, ಸುಹೈಲ್ ರೆಂಜಲಾಡಿ, ಆಸಿಫ್ ಮುಂಡೂರು, ಹಸೈನಾರ್ ಕಲ್ಪಣೆ, ನಾಸಿರ್ ಅಜ್ಜಿಕಲ್ಲು, ತಮೀಮ್ ಕೂಡುರಸ್ತೆ, ಇಸ್ಮಾಯಿಲ್ ಕಲ್ಪಣೆ ಮತ್ತಿತರರು ಉಪಸ್ಥಿತರಿದ್ದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ ಅಧ್ಯಕ್ಷತೆ ವಹಿಸಿದ್ದರು. ವಲಯ ಪ್ರ.ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ರಾಮಚಂದ್ರ ಸೊರಕೆ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ ಸದಸ್ಯ ಕಮಲೇಶ್. ಎಸ್.ವಿ ವಂದಿಸಿದರು.

LEAVE A REPLY

Please enter your comment!
Please enter your name here