ಪುತ್ತೂರು: ಶ್ರೀರಾಮ ಭಜನಾ ಮಂದಿರ ಭಕ್ತಕೋಡಿ ಇದರ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಂದಿರದ ಕಛೇರಿಯಲ್ಲಿ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರ ಕಾರ್ಯದರ್ಶಿ ರಾಜೇಶ್ ಎಸ್.ಡಿ 2021-22ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧಕ ವರದಿಯನ್ನು ಮಂಡಿಸಿದರು. ಗೌರವಾಧ್ಯಕ್ಷರಾದ ಜಿ.ಕೆ ಪ್ರಸನ್ನ ಜಿ ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
2022-23ರ ಸಾಲಿನ ಗೌರವಾಧ್ಯಕ್ಷರಾಗಿ ಜಿ.ಕೆ ಪ್ರಸನ್ನ, ಅಧ್ಯಕ್ಷರಾಗಿ ರಾಜೇಶ್ ಎಸ್ ಡಿ ಆಲೇಕಿ ಸರ್ವೆದೋಳಗುತ್ತು, ಪ್ರ.ಕಾರ್ಯದರ್ಶಿಯಾಗಿ ಲಕ್ಷ್ಮಣ ಆಚಾರ್ಯ ಭಕ್ತಕೋಡಿ, ಖಜಾಂಚಿಯಾಗಿ ಗೀತಾ ನಾರಾಯಣ ಪೂಜಾರಿ ಮರಿಯ, ಉಪಾಧ್ಯಕ್ಷರಾಗಿ ಜನಾರ್ದನ ಗೌಡ ಭಕ್ತಕೋಡಿ ಅವರನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳಾಗಿ ಶಶಿಧರ್ ಎಸ್ ಡಿ ಸರ್ವೆದೋಳಗುತ್ತು, ಉಮಾವತಿ ಜಯರಾಜ್ ಸುವರ್ಣ ಸೊರಕೆ, ರಾಮಣ್ಣ ಶೆಟ್ಟಿ ಬೊಟ್ಯಾಡಿಗುತ್ತು, ಯೋಗೀಶ್ ಮಡಿವಾಳ ಕಲ್ಪಣೆ, ಪ್ರಮೋದ್ ಕುಮಾರ್ ಅಲೇಕಿ, ಮನೋಜ್ ಸುವರ್ಣ ಸೊರಕೆ, ತಿಲಕ್ ರಾಜ್ ಕರಂಬಾರು, ಕಮಲೇಶ್ ಸರ್ವೆದೋಳಗುತ್ತು ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯ ಕರಂಬಾರು ಮಾತನಾಡಿ ಭಜನಾ ಮಂದಿರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಎರಡೂವರೆ ವರ್ಷಗಳ ಅಧ್ಯಕ್ಷನಾಗಿದ್ದ ವೇಳೆ ಸಹಕರಿಸಿದ ಗ್ರಾಮಸ್ಥರು, ಸಮಿತಿ ಸದಸ್ಯರಿಗೆ ಅಭಾರಿಯಾಗಿದ್ದೇನೆ. ಹೆಚ್ಚು ಮಂದಿ ಮಂದಿರದ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾರ್ಷಿಕ ಸದಸ್ಯತ್ವ ಪಡೆಯುವಂತಾಗಬೇಕು ಎಂದರು. ರಾಜೇಶ್ ಎಸ್ ಡಿ ವಂದಿಸಿದರು.