ಪುತ್ತೂರು: ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕನ್ನಡದ ಪ್ರಥಮ ರಾಜಧಾನಿ ಶಿರಸಿಯ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ-2023ರಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ ಕಲಾ ತಂಡದಿಂದ ಮಾ.1ರಂದು ‘ನವರಸ’ ನೃತ್ಯರೂಪಕ ವಿಶೇಷವಾಗಿ ಪ್ರದರ್ಶನಗೊಳ್ಳಲಿದೆ.
ಕದಂಬೋತ್ಸವದ ಎರಡನೇ ದಿನ ಬುಧವಾರ ಬನವಾಸಿಯ ಮಯೂರವರ್ಮ ಪ್ರಧಾನ ವೇದಿಕೆಯಲ್ಲಿ ಸಂಜೆ ಕಲಾಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ
ಆತ್ಮಭೂಷಣ್ ನಿರ್ದೇಶನದಲ್ಲಿ ಈ ವಿಶೇಷ ನೃತ್ಯರೂಪಕವನ್ನು ಕಲಾ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.