ಬೆಂಗಳೂರು : ಚಿತ್ರ ನಿರ್ಮಾಣವೆಂದರೆ ಬೆಂಗಳೂರಿಗೆ ಸೀಮಿತವಾದ ಕಾಲವೊಂದಿತ್ತು ಆದರೆ ಈಗ ಕರಾವಳಿಯಲ್ಲಿಯೂ ಚಿತ್ರ ನಿರ್ಮಾಣಗೊಂಡು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.4 ವರ್ಷಗಳ ಹಿಂದೆ ತುಳು ರಂಗಭೂಮಿಯ ದಿಗ್ಗಜ ಕಲಾವಿದರು ಮತ್ತು ಸ್ಟಾರ್ ಸುವರ್ಣ ಡಾನ್ಸ್ ಡಾನ್ಸ್ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ದೀಕ್ಷಾ ಡಿ ರೈ ಅಭಿನಯದ, ದೃಶ್ಯ ಮೂವೀಸ್ ಬ್ಯಾನರ್ ಅಡಿ ಉದ್ಯಮಿ ದಯಾನಂದ್ ಎಸ್ ರೈ ನಿರ್ಮಾಣದಲ್ಲಿ ತಯಾರಾದ “ಪೆನ್ಸಿಲ್ ಬಾಕ್ಸ್” ಈಗಲೂ ಸದ್ದು ಮಾಡುತ್ತಿದೆ.

ಫೆ.22ರಿಂದ, ಫೆ.26ರ ವರೆಗೆ ಉಲ್ಲಾಸ್ ಸ್ಕೂಲ್ ಆಫ್ ಸಿನೆಮಾಸ್ ಇದೇ ಮೊದಲ ಬಾರಿಗೆ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅಂತರ್ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಿದ್ದು, ಪೆನ್ಸಿಲ್ ಬಾಕ್ಸ್ ಚಿತ್ರದ ಅಭಿನಯಕ್ಕಾಗಿ ದೀಕ್ಷಾ ಡಿ ರೈ ಅತ್ತ್ಯುತ್ತಮ ಬಾಲನಟಿ ಪ್ರಶಸ್ತಿ ಪಡೆದಿದ್ದಾರೆ. ದೇಶ ವಿದೇಶಗಳ 60 ಮಕ್ಕಳ ಚಿತ್ರಗಳ ಪೈಕಿ 12 ಚಿತ್ರಗಳು ಪ್ರಶಸ್ತಿಗಾಗಿ ನಾಮ ನಿರ್ದೇಶನಗೊಂಡಿತ್ತು. ಈ ಪೈಕಿ ಪೆನ್ಸಿಲ್ ಬಾಕ್ಸ್ ಚಿತ್ರದ ಅಭಿನಯಕ್ಕಾಗಿ ದೀಕ್ಷಾ ಡಿ ರೈ ಅತ್ತ್ಯುತ್ತಮ ಬಾಲನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರಗಳಿಗೆ ಮತ್ತು ನಟರಿಗೆ ಅಪ್ಪು ಹೆಸರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.

