ಚಿತ್ರ: ಕ್ಲಾಸಿಕ್ಲಿಕ್ಸ್ ಪುತ್ತೂರು
ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಮಾಲ್ ಬಳಿಯ ಲಕ್ಷ್ಮೀ ಹೊಟೇಲ್ ಎದುರುಗಡೆ ವ್ಯವಹರಿಸುತ್ತಿದ್ದ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು, ಗಿಫ್ಟ್ ಆರ್ಟಿಕಲ್ಸ್, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಾಗ್ರಿಗಳ ಉದ್ಯಮದಲ್ಲಿ ಸುಮಾರು 15 ವರ್ಷಕ್ಕೂ ಮಿಕ್ಕಿ ಅನುಭವ ಹೊಂದಿರುವ ‘ಪ್ರೀಮಾ ಮೆಟಲ್ ಮಾರ್ಟ್’ ಸಂಸ್ಥೆಯು ಎಂ.ಟಿ ರಸ್ತೆಯಲ್ಲಿನ ಸ್ಟೈಲ್ ಪಾರ್ಕ್(ಹಿಂದಿನ ಪೂಜಾ ಹೊಟೇಲ್) ಬಳಿ ಸ್ಥಳಾಂತರಗೊಂಡು ಮಾ.1 ರಂದು ಶುಭಾರಂಭಗೊಂಡಿತು.
ಮಾಯಿದೆ ದೇವುಸ್ ಚರ್ಚ್‌ನ ಸಹಾಯ ಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚಿಸಿ ಮಾತನಾಡಿ, ಈಗಾಗಲೇ ಉದ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ವಿಜಯ್ ಮಸ್ಕರೇನ್ಹಸ್ ಸಹೋದರರ ಈ ಸಂಸ್ಥೆಯು ತನ್ನ ಗುಣಮಟ್ಟದ, ನಗುಮುಖದ ವ್ಯಾಪಾರದೊಂದಿಗೆ ಗ್ರಾಹಕರ ಮನ ಸೆಳೆದಿದೆ. ಇದೀಗ ಸಂಸ್ಥೆಯು ಪುತ್ತೂರಿನ ಹೃದಯ ಭಾಗದಲ್ಲಿ ಮತ್ತಷ್ಟು ವಿಸ್ತಾರವಾದ ಜಾಗದೊಂದಿಗೆ ತೆರೆದುಕೊಂಡಿದ್ದು ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಲಿದೆ. ಗುಣಮಟ್ಟದ ವಸ್ತುಗಳು ಹಾಗೂ ನಗುಮುಖದ ಸೇವೆಯಿದ್ದಲ್ಲಿ ಯಾವುದೇ ಸಂಸ್ಥೆಯು ಯಶಸ್ವಿ ಪಥದಲ್ಲಿ ಸಾಗಬಲ್ಲುದಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಅಭಿವೃದ್ಧಿ ಹೊಂದಿ ಅಧಿಕ ಶಾಖೆಗಳಾಗಿ ಹೊರ ಹೊಮ್ಮಲಿ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ನಿಕಟಪೂರ್ವ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ದಿನೇಶ್ ಭವನ ಕಟ್ಟಡ ಮಾಲಕ ರಮೇಶ್ ರೈ,ಸ್ಟೈಲ್ ಪಾರ್ಕ್ ಮಾಲಕ ಮೊಹಮದ್ ಷರೀಪ್, ಶೂ ಬಜಾರ್ ಮಾಲಕ ಅಬೂಬಕ್ಕರ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ನಿಕಟಪೂರ್ವ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ನಗರಸಭಾ ಸದಸ್ಯ ಅನ್ವರ್ ಖಾಸಿಂ, ಪ್ರಸಾದ್ ಇಂಜಿನಿಯರಿಂಗ್ ನ ಶಿವಪ್ರಸಾದ್ ಶೆಟ್ಟಿ, ಆಂಬ್ರೋಸ್ ಮಸ್ಕರೇನ್ಹಸ್ ಚೆನ್ನಿಗಾರು, ಉದ್ಯಮಿ ಯಾಕೂಬ್ ಮುಲಾರ್, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಉಪನ್ಯಾಸಕ ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್, ಸೋಜಾ ಮೆಟಲ್ ಮಾರ್ಟ್ ಮಾಲಕ ದೀಪಕ್ ಮಿನೇಜಸ್,ಪುತ್ತೂರು ಡಯೋಗ್ನಾಸ್ಟಿಕ್ ಲ್ಯಾಬೋರೇಟರಿ ಮಾಲಕ ನೋಯಲ್ ಡಿ”ಸೋಜ, ನವಜೀವನ್ ಫ್ಲವರ್ಸ್ ಮಾಲಕ ಜೋನ್ ಪೀಟರ್(ವಲ್ಲು) ಡಿ’ಸಿಲ್ವ, ಪಾವ್ಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ವಿನ್ಸೆಂಟ್ ಸಿಕ್ವೇರಾ ಬಲ್ನಾಡು, ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು, ಲಾರೆನ್ಸ್ ಫುಡ್ತಾದೋ ಕಜೆ, ಎಪಿಎಂಸಿ ಆವಿನ್ ಎಲೆಕ್ಟ್ರೋನಿಕ್ಸ್ ಮಾಲಕ ಮೆಲ್ವಿನ್ ಫೆರ್ನಾಂಡೀಸ್, ರೋಯ್ಸ್ ಪಿಂಟೋ ದರ್ಬೆ, ನಿವೃತ್ತ ಶಿಕ್ಷಕಿ ಲೀನಾ ಫುಡ್ತಾದೋ, ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಯಿಸ್, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಓಲಿವರ್ ಮದಕ, ಇಸಾಖ್ ಸಾಲ್ಮರ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್ ನ ಸುನಿಲ್ ಮಸ್ಕರೇನ್ಹಸ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಯಿಸ್, ಶೆರಿ ಮಸ್ಕರೇನ್ಹಸ್ ಪರ್ಲಡ್ಕ, ಆಲ್ವಿನ್ ಗೊನ್ಸಾಲ್ವಿಸ್ ಬನ್ನೂರು, ವಿನ್ಸೆಂಟ್ ತಾವ್ರೋ ಎಪಿಎಂಸಿ ರಸ್ತೆ, ಪಾವ್ಲ್ ಮೊಂತೇರೊ ಕಲ್ಲಾರೆ, ಪ್ರದೀಪ್ ಸ್ವೀಟ್ಸ್ ನ ಪ್ರದೀಪ್ ಮೊರಾಸ್ ಸಹಿತ ಹಲವರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಲ್ಯಾನ್ಸಿ ಮಸ್ಕರೇನ್ಹಸ್ ರವರ ಪತ್ನಿ ಉಪನ್ಯಾಸಕಿ ಪ್ರಿಯಲತಾ ಡಿ’ಸಿಲ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲ್ಯಾನ್ಸಿ ಮಸ್ಕರೇನ್ಹಸ್ ರವರ ಸಹೋದರ ವಿಜಯ್ ಮಸ್ಕರೇನ್ಹಸ್ ವಂದಿಸಿದರು. ಲ್ಯಾನ್ಸಿ ಮಸ್ಕರೇನ್ಹಸ್ ರವರ ಸಹೋದರಿ ವೀಡಾ ಸಿಕ್ವೇರಾ, ಲ್ಯಾನ್ಸಿ ಮಸ್ಕರೇನ್ಹಸ್ ರವರ ಸಹೋದರರು, ಕುಟುಂಬಿಕರು ಉಪಸ್ಥಿತರಿದ್ದರು.
ತಾಮ್ರ, ಹಿತ್ತಾಳೆ ಪಾತ್ರೆಗಳ ತಯಾರಿಕೆಯಲ್ಲಿ 35 ವರ್ಷಗಳ ಅನುಭವ…
ಕಳೆದ ಹದಿನೈದು ವರ್ಷಗಳಿಂದ ಈ ಉದ್ಯಮವನ್ನು ಮುನ್ನೆಡೆಸುತ್ತಾ ಬಂದಿದ್ದೇವೆ. ತಾಮ್ರ, ಹಿತ್ತಾಳೆ ಪಾತ್ರೆಗಳ ತಯಾರಿಕೆಯಲ್ಲಿ ಸುಮಾರು 35 ವರ್ಷಗಳಿಗೂ ಮಿಕ್ಕಿ ಅನುಭವ ಹೊಂದುದ್ದು, ಗ್ರಾಹಕರು ನಮ್ಮನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಗ್ರಾಹಕರೇ ನಮ್ಮ ಸರ್ವಸ್ವ. ನಮ್ಮಲ್ಲಿ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು, ಗಿಪ್ಟ್ ಆರ್ಟಿಕಲ್ಸ್, ಪ್ಲಾಸ್ಟಿಕ್, ಪೂಜಾ ಸಾಮಾಗ್ರಿಗಳು, ಗೃಹೋಪಯೋಗಿ ವಸ್ತುಗಳು ಇದೀಗ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲವಾದ ವ್ಯವಸ್ಥೆಯೊಂದಿಗೆ ತೆರೆದುಕೊಂಡು ಸ್ಥಳಾಂತರಗೊಂಡಿದ್ದು ಕೈಗೆಟಕುವ ದರದಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 9900981865, 9986446697, 9448445852 ನಂಬರಿಗೆ ಸಂಪರ್ಕಿಸಬಹುದಾಗಿದೆ.
-ಲ್ಯಾನ್ಸಿ ಮಸ್ಕರೇನ್ಹಸ್, ಮಾಲಕರು ಹಾಗೂ ಪುತ್ತೂರು ಪುರಸಭಾ ಮಾಜಿ ಉಪಾಧ್ಯಕ್ಷರು