ನೂತನ ಉಷಾ ಮೆಮೋರಿ ಕ್ರಾಪ್ಟ್‌ ಎಂಬ್ರಾಯಿಡರಿ ಹೊಲಿಗೆ ಯಂತ್ರ ಮಾರುಕಟ್ಟೆಗೆ

0

ಪುತ್ತೂರು: ಕಸೂತಿ ಎಂಬುವುದು ಪುರಾತನವಾದ ವಿವಿಧ ಆಲಂಕಾರಿಕ ಸೂಜಿ ಕೆಲಸ. ಕೆಲವು ವಸ್ತುಗಳ ಎಲೆಗಳನ್ನು ಮತ್ತೊಂದು ವಸ್ತುವಿನ ಪದರಕ್ಕೆ ಹೊಲಿಯುವ ಮೂಲಕ ವಿನ್ಯಾಸ ಮತ್ತು ಚಿತ್ರಗಳನ್ನು ರಚಿಸಲಾಗುತ್ತದೆ. ಸೂಜಿ ಮತ್ತು ದಾರ ಬಳಸಿ ಮಾಡುವ ಈ ರಚನೆ ಬಟ್ಟೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಕಸೂತಿ ಹೊಲಿಗೆ ಜನಪ್ರೀಯತೆ ಪಡೆದಂತೆ ಭಾರತದ ಇತರ ರಾಜ್ಯಗಳು ಎಂಬ್ರಾಯಿಡರಿಯಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದೆ. ದುಬಾರಿ ಮತ್ತು ಕಠಿಣ ಪರಿಶ್ರಮದಿಂದ ಮಾಡುತ್ತಿದ್ದ ಎಂಬ್ರಾಯಿಡರಿ ಕೆಲಸಕ್ಕೆ ಹೆಚ್ಚಿನ ಸಮಯವು ವ್ಯಯವಾಗುತ್ತಿತ್ತು. ಇದಕ್ಕೆಲ್ಲ ಪೂರ್ಣ ವಿರಾಮ ಹಾಕಿರುವ ಹೊಲಿಗೆ ಮಷೀನ್‌ ಗಳ ದಿಗ್ಗಜ ಉಷಾ ಹೊಲಿಗೆಯಂತ್ರ ನಿರ್ಮಾಣ ಸಂಸ್ಥೆ ಇದಕ್ಕಾಗಿಯೇ ಹೊಲಿಗೆ ಯಂತ್ರವೊಂದನ್ನು ಆವಿಷ್ಕರಿಸಿದೆ, ಎಂಬ್ರಾಯಿಡರಿ ಕೆಲಸವನ್ನು ಸುಲಭವಾಗಿ ಮಾಡಬಲ್ಲ ಉಷಾ ಮೆಮೋರಿ ಕ್ರಾಪ್ಟ್‌ ಎಂಬ ಎಂಬ್ರಾಯಿಡರಿ ಹೊಲಿಗೆ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಮಹಿಳೆಯರಿಗೆ ಮತ್ತು ವೃತ್ತಿ ನಿರತ ದರ್ಜಿಗಳಿಗೆ ಸಹಕಾರಿಯಾಗಿದೆ.

ಅಚ್ಚರಿಯ ಸಾಮರ್ಥ್ಯ ಹೊಂದಿರುವ ಈ ಮಷೀನ್‌ ನಲ್ಲಿ 450ಇನ್‌ ಬಿಲ್ಟ್‌ ವಿನ್ಯಾಸಗಳಿದೆ ಅಲ್ಲದೆ ನಿಮಗೆ ಬೇಕಾದ ವಿನ್ಯಾಸವನ್ನು ಪೆನ್‌ ಡ್ರೈವ್‌ ಮೂಲಕವೂ ಹಾಕಿ ನಿಮಗಿಷ್ಟವಾದ ಎಂಬ್ರಾಯಿಡರಿ ರಚಿಸಬಹುದಾಗಿದೆ.ಎಂಬ್ರಾಯಿಡರಿಯಲ್ಲಿ ನಿಮಗಿರುವ ಚಾಕಚಕ್ಯತೆ ಪ್ರಾವೀಣ್ಯತೆಯನ್ನು ಮೇಲ್ದರ್ಜೆಗೆ ಏರಿಸಿ ಮುಂದಿನ ಹಂತಕ್ಕೆ ಕೊಂಡೊಯ್ಯಬಲ್ಲ ಎಲ್ಲಾ ಸರಳ ಸೌಕರ್ಯವನ್ನು ಹೊಂದಿರುವ ಈ ಹೊಲಿಗೆ ಯಂತ್ರ ನಗರದ ಏಳ್ಮುಡಿಯಲ್ಲಿರುವ ದೇವಾ ಟ್ರೇಡರ್ಸ್‌ ನಲ್ಲಿ ಲಭ್ಯವಿದೆ. ಮಾರ್ಚ್‌ 2 ಮತ್ತು 3 ರಂದು ಇದರ ಪ್ರಾತ್ಯಕ್ಷಿತೆಯು ಲಭ್ಯವಿದೆ ಎಂದು ಉಷಾ ಹೊಲಿಗೆಯಂತ್ರ ಸಂಸ್ಥೆಯ ಪ್ರಮೋಟರ್‌ ಮನೋಜ್‌ ಕುಮಾರ್‌ ಮತ್ತು ದೇವಾ ಟ್ರೇಡರ್ಸ್‌ ನ ಮಾಲಕ ಟಿ.ವಿ ರವೀಂದ್ರನ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here