ಮಾರ್ಚ್ 4ರಿಂದ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ

0

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಅಂಗೀಕೃತ ಮದರಸಗಳ ಪಬ್ಲಿಕ್ ಪರೀಕ್ಷೆ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ.
ಕೇರಳದ ಜೇಲಾರಿ ಕೇಂದ್ರಸ್ಥಾನವಾಗಿ ಕಾರ್ಯಾಚರಿಸುವ ಸಮಸ್ತ ಸಿಲಬಸ್ ಕ್ರಮದಲ್ಲಿ ಪರೀಕ್ಷೆಗಳು ನಡೆಯಲಿದೆ. ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಿಗಾಗಿ ನಡೆಯುವ ಪಬ್ಲಿಕ್ ಪರೀಕ್ಷೆಗೆ ದ.ಕ ಜಿಲ್ಲೆಯಲ್ಲಿ 9,340 ಪರೀಕ್ಷಾರ್ಥಿಗಳಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 477 ಕೇಂದ್ರಗಳನ್ನು ಪರೀಕ್ಷೆಗೆ ನಿಗದಿಗೊಳಿಸಲಾಗಿದ್ದು 5ನೇ ತರಗತಿಯಲ್ಲಿ 4543 ವಿದ್ಯಾರ್ಥಿಗಳು, ಏಳನೇ ತರಗತಿಯಲ್ಲಿ 3751 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 970 ವಿದ್ಯಾರ್ಥಿಗಳು, ಪ್ಲಸ್ ಟು ತರಗತಿಯಲ್ಲಿ 76 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9340 ಪರೀಕ್ಷಾರ್ಥಿಗಳು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿ ಇದ್ದ ಮುಲ್ಕಿ, ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಡಿವಿಷನ್ ಗಳ ಹೊರತಾಗಿ ದೇರಳಕಟ್ಟೆ ಹಾಗೂ ಸುಳ್ಯ ಎರಡು ಹೆಚ್ಚುವರಿ ವಿಭಾಗೀಯ ಕೇಂದ್ರಗಳನ್ನು ಸೇರಿಸಲಾಗಿದ್ದು ಒಟ್ಟು ಎಂಟು ವಿಭಾಗಿಯ ಕೇಂದ್ರಗಳಾಗಿ ವಿಂಗಡಿಸಲಾಗಿದೆ.

ಮುಲ್ಕಿ ವಿಭಾಗದ ಕೇಂದ್ರಸ್ಥಾನವನ್ನು ಮೂಡಬಿದ್ರೆಯ ಹಂಡೇಲು ಖಾದಿರಿಯ್ಯಾ ಮದರಸಕ್ಕೆ ವರ್ಗಾಯಿಸಲಾಗಿದ್ದು ದೇರಳಕಟ್ಟೆ ವಿಭಾಗಕ್ಕೆ ಹಯಾತುಲ್ ಇಸ್ಲಾಂ ದೇರಳಕಟ್ಟೆ ಟೌನ್ ಮದರಸ ಹಾಗೂ ಸುಳ್ಯ ವಿಭಾಗಕ್ಕೆ ಕಾವು ನೂರುಲ್ ಇಸ್ಲಾಂ ಮದರಸವನ್ನು ಕೇಂದ್ರ ಸ್ಥಾನವಾಗಿ ನಿಗದಿಪಡಿಸಲಾಗಿದೆ. ಕೆಲವೊಂದು ರೇಂಜ್ ಗಳ ಡಿವಿಷನ್ ಕೇಂದ್ರಗಳಲ್ಲಿಯೂ ಬದಲಾವಣೆಯಾಗಿದ್ದು ಸಂಬಂಧಪಟ್ಟವರಿಗೆ ಈಗಾಗಲೇ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಸುತ್ತೋಲೆಗಳನ್ನು ಕಳುಹಿಸಿಕೊಡಲಾಗಿದೆ.
ವಿಭಾಗಿಯ ಕೇಂದ್ರಗಳ ಅಧೀಕ್ಷಕರಾಗಿ ಅಬ್ದುಲ್ಲ ಫೈಝಿ ಆದೂರು, ಕಾಸಿಂ ಮುಸ್ಲಿಯಾರ್ ಮಠ, ಉಮರ್ ದಾರಿಮಿ ಸಾಲ್ಮರ, ಹನೀಫ್ ಮುಸ್ಲಿಯಾರ್ ಬೋಳಂತೂರು, ಮುಹಮ್ಮದ್ ದಾರಿಮಿ ಚೆಂಗಳ, ಫಾರೂಕ್ ದಾರಿಮಿ ತೆಕ್ಕಾರು, ಹಮೀದ್ ದಾರಿಮಿ ಕಕ್ಕಿಂಜೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಕಾರ್ಯನಿರ್ವಹಿಸಲಿದ್ದಾರೆ.
ಎಲ್ಲಾ ಪರೀಕ್ಷಾರ್ಥಿಗಳಿಗೆ ಈಗಾಗಲೇ ಭಾವಚಿತ್ರವಿರುವ ಹಾಲ್ ಟಿಕೆಟ್ ಗಳನ್ನು ನೀಡಲಾಗಿದೆ.

ಮಾರ್ಚ್ ನಾಲ್ಕರಂದು ನಡೆಯುವ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ಭಾಗವಹಿಸಬೇಕಾದ ಕೆಲವು ವಿದ್ಯಾರ್ಥಿಗಳಿಗೆ ಆ ದಿನ ಎಸ್‌ಎಸ್‌ಎಲ್‌ಸಿ, ಪ್ಲಸ್ ಟು, ವಿಎಚ್‌ಎಸ್‌ಇ ಮೋಡೆಲ್ ಪರೀಕ್ಷೆ, ಸಿಬಿಎಸ್‌ಇ ಪಬ್ಲಿಕ್ ಪರೀಕ್ಷೆ ಮೊದಲಾದವುಗಳಲ್ಲಿ ಭಾಗವಹಿಸಲಿಕ್ಕಿರುವುದರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾತ್ರ ಮಾರ್ಚ್ 12 ರಂದು ಆದಿತ್ಯವಾರ ಆಯಾ ಮದರಸ ಪರೀಕ್ಷಾ ಸೆಂಟರ್‌ಗಳಲ್ಲಿಯೇ ಸ್ಪೆಷಲ್ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here